ರಿಷಿ ಜತೆಗೆ ಕನ್ನಡತಿ ರಂಜನಿ ರಾಘವನ್​

Ullasa 1
Published on

ಬೆಂಗಳೂರು: ಈಗಾಗಲೇ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣ ಇಲ್ಲ’ ಮತ್ತು ‘ಸತ್ಯಂ’ ಎಂಬ ಚಿತ್ರಗಳಲ್ಲಿ ನಟಿಸುತ್ತಿರುವ ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್, ಇದೀಗ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿರುವುದಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅಂದಹಾಗೆ, ರಂಜನಿ ಒಪ್ಪಿಕೊಂಡಿರುವುದು ಜಯತೀರ್ಥ ನಿರ್ದೇಶನದ ಹೊಸ ಚಿತ್ರದಲ್ಲಿ.

ಕನ್ನಡದ ಐವರು ನಿರ್ದೇಶಕರು ಸೇರಿ ಒಂದು ಚಿತ್ರ ಮಾಡುತ್ತಿರುವ ವಿಷಯ ಗೊತ್ತಲ್ಲ? ಇದರಲ್ಲಿ ಜಯತೀರ್ಥ ಸಹ 30 ನಿಮಿಷಗಳ ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಅದರಲ್ಲಿ ರಂಜನಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿ ರಂಜನಿ ನಟಿಸುತ್ತಿದ್ದು, ಚಿತ್ರೀಕರಣ ಪ್ರಾರಂಭವಾಗಿದೆ. ರಂಜನಿ ಜತೆಗೆ ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ ಸಹ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮಿಕ್ಕಂತೆ ರಾಘು ಶಿವಮೊಗ್ಗ, ಶರಣ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net