ಕೆಜಿಎಫ್​ ಶೂಟಿಂಗ್​ ಮುಗಿದು ವಾರವಾಯ್ತು; ಮನೆಯತ್ತ ಇನ್ನೂ ಮುಖ ಮಾಡದ ಯಶ್​!

Yash
Published on

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್​ ಚಾಪ್ಟರ್ 2 ಕಳೆದ ವಾರವಷ್ಟೇ ಶೂಟಿಂಗ್​ ಮುಗಿಸಿಕೊಂಡು ಕುಂಬಳಕಾಯಿ ಒಡೆದಿದೆ. ಇತ್ತ ಪ್ರಶಾಂತ್ ನೀಲ್ ಸಲಾರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದರೆ, ಹೊಂಬಾಳೆ ನಿರ್ಮಾಣ ಸಂಸ್ಥೆ ಆ ಚಿತ್ರದ ಬಗ್ಗೆ ಒಂದಷ್ಟು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಹಾಗಾದರೆ, ಯಶ್​ ಏನು ಮಾಡುತ್ತಿದ್ದಾರೆ? ಸದ್ಯಕ್ಕೆ ಅವರಿನ್ನು ಮನೆ ಸೇರಿಲ್ಲ!

ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಮುಗಿದು ವಾರ ಕಳೆದರೂ, ಯಶ್ ಈ ವರೆಗೂ ಮನೆಯತ್ತ ಮುಖ ಮಾಡಿಲ್ಲ. ಮುದ್ದು ಮಕ್ಕಳ ಮುಖವನ್ನು ನೋಡಿಲ್ಲ. ಅಪ್ಪಿ ಮುದ್ದಾಡಿಲ್ಲ. ಬದಲಿಗೆ ನಗರದ ಪ್ರತಿಷ್ಟಿತ ಐಷಾರಾಮಿ ಹೋಟೆಲ್​ವೊಂದರಲ್ಲಿ ಕಾಲ ಕಳೆಯುತ್ತಿದ್ದಾರೆ. ಅರೇ, ಮನೆಗೆ ತೆರಳುವುದು ಬಿಟ್ಟು ಅಲ್ಲೇನು ಮಾಡುತ್ತಿದ್ದಾರೆ ಎಂಬ ಗುಮಾನಿ ನಿಮ್ಮನ್ನ ಕಾಡಬಹುದು. ಅದಕ್ಕೆ ಅಷ್ಟೇ ಬಲವಾದ ಕಾರಣವೂ ಇದೆ.

ಕಳೆದ ಹಲವು ದಿನ ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿಯೇ ಕಾಲ ಕಳೆದಿದ್ದ ಯಶ್, ಚಿತ್ರೀಕರಣ ಕೆಲಸ ಮುಗಿಸಿಕೊಂಡು ಹೋಟೆಲ್​ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ಮನೆಗೆ ತೆರಳುವ ಬದಲು ಹೋಟೆಲ್​ನಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಮನೆಯಲ್ಲಿ ಪುಟಾಣಿ ಮಕ್ಕಳಿರುವ ಹಿನ್ನೆಲೆಯಲ್ಲಿ ತಮ್ಮಿಂದ ಇತರರಿಗೂ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಯಶ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಒಂದು ವಾರದ ಐಸೋಲೇಷನ್ ಮುಗಿದಿದ್ದು, ಇನ್ನೊಂದು ವಾರ ಮುಗಿಸಿ ಮನೆಗೆ ತೆರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net