ಗುರುಪೌರ್ಣಿಮೆ ದಿನದಂದು ತಂಗಿ ಕಂಗನಾಗೆ ಹೊಸ ಬಿರುದು ಕೊಟ್ಟ ರಂಗೋಲಿ

KanganaRanautRangoliChandel
Published on

ಸಹಜವಾಗಿ ಗುರು ಪೌರ್ಣಿಮೆಯಂದು ಕಲಿಸಿದ ಗುರುಗಳಿಗೂ, ಮಾರ್ಗದರ್ಶಕರಿಗೋ, ಹೆತ್ತ ತಂದೆತಾಯಂದಿರಿಗೋ ಶುಭ ಕೋರುವುದು ಸಹಜ. ಹೀಗಿರುವಾಗ ಬಾಲಿವುಡ್​ ನಟಿ ಕಂಗನಾ ಸಹೋದರಿ ರಂಗೋಲಿ ಚಾಂಡೇಲ್ ಸಹ ಗುರುಪೌರ್ಣಿಮೆ ನಿಮಿತ್ತ ಶುಭಕೋರಿದ್ದಾರೆ. ಹಾಗೆ ಶುಭಾಶಯ ಕೋರಿದ್ದು ಬೇರಾರಿಗೂ ಅಲ್ಲ ತಂಗಿ ಕಂಗನಾಗೆ!

ಹೌದು, ‘ನೀನೇ ನನ್ನ ಪಾಲಿನ ಪುಟಾಣಿ ಗುರು. ಜಗತ್ತಿನಲ್ಲಿ ನಾನು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟವಳು ನೀನು. ಒಂದಷ್ಟು ಕಷ್ಟದ ಕಾಲದಲ್ಲಿ ನನ್ನ ಕೈ ಬಿಡದೆ, ಜತೆಯಾಗಿ ನಿಂತವಳು ನೀನು. ಹಾಗಾಗಿ ಗುರುಪೌರ್ಣಿಮೆ ಪ್ರಯುಕ್ತ ನನ್ನ ಪುಟ್ಟ ತಂಗಿಗೆ ಹೃದಯಪೂರ್ವಕ ಶುಭಾಶಯಗಳು’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಇನ್ನು ಬಾಲಿವುಡ್​ನಲ್ಲಿ ಕಂಗನಾ ಯಾರ ಮಾತಿಗೂ ಮಣೆ ಹಾಕುವುದಿಲ್ಲ. ನೇರ ಮತ್ತು ನಿಷ್ಠುರ. ಯಾರಿಗೂ ಮುಲಾಜಿಟ್ಟುಕೊಳ್ಳದೆ, ನೇರವಾಗಿ ಮಾತನಾಡುತ್ತಾರೆ. ಅದೇ ರೀತಿ ತಂಗಿಯ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ರಂಗೋಲಿ ಚಾಂಡೇಲ್​ ನಿಲ್ಲುತ್ತಿದ್ದಾರೆ. ಕಂಗನಾ ಅವರ ಎಷ್ಟೋ ವಿವಾದಗಳಿಗೆ ಸ್ಬತಃ ರಂಗೋಲಿ ಮುಂದಾಳತ್ವ ವಹಿಸಿಕೊಂಡು, ತಂಗಿಗೆ ಬಲವಾಗಿ ನಿಂತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net