ಇಂದು ಈ ಟಾಲಿವುಡ್ ನಟನ ನಿಶ್ಚಿತಾರ್ಥ; ಮದುವೆ ಯಾವಾಗ?

Untitled
Published on

ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೇ ನಾನಿನ್ನು ಎಂಗೇಜ್ಡ್​ ಎಂದು ಹೇಳಿಕೊಂಡು, ತಾವು ಮದುವೆಯಾಗೋ ಹುಡುಗಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಶೀ ಸೇಡ್​ ಯೆಸ್​ ಎಂಬ ಕ್ಯಾಪ್ಶನ್​ ಕೊಟ್ಟು, ಮಿಹೀಕಾ ಬಜಾಜ್​ ಅವರ ಜತೆಗಿನ ಚೆಂದದ ಫೋಟೋ ಹಂಚಿಕೊಂಡಿದ್ದರು. ಇದೀಗ ಇದೇ ಜೋಡಿ ನಿಶ್ಚಿತಾರ್ಥಕ್ಕೆ ಅಣಿಯಾಗುತ್ತಿದೆ. ಅದೂ ಇಂದೇ! (ಮೇ 20)

ಹೌದು, ಕರೊನಾ ಹಿನ್ನೆಲೆಯಲ್ಲಿ ಸರಳತೆಗೆ ಮತ್ತು ಸೀಮಿತ ಜನರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದೆ. ಹೈದರಾಬಾದ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕುಟುಂಬಸ್ಥರಷ್ಟೇ ಹಾಜರಿ ಹಾಕಲಿದ್ದಾರೆ. ಜತೆಗೆ ಮದುವೆ ಯಾವಾಗ ಎಂಬ ವಿಷಯವನ್ನೂ ಇಂದೇ ನಿರ್ಧರಿಸಲಾಗುತ್ತದೆಯಂತೆ.

ಈಗಾಗಲೇ ಕೆಲ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್​ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿಯಂತೆ. ಸದ್ಯಕ್ಕೆ ನಿಶ್ಚಿತಾರ್ಥ ಮುಗಿಸಿಕೊಂಡು, ಮದುವೆ ಕೆಲಸಗಳಿಗೂ ಎರಡು ಕುಟುಂಬಗಳು ಚಾಲನೆ ನೀಡಲಿವೆಯಂತೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡು, ಡಿಸೆಂಬರ್​ ವೇಳೆಗೆ ಅದ್ದೂರಿಯಾಗಿ ಮದುವೆ ಕಾರ್ಯ ನಡೆಸಲು ಎರಡು ಕುಟುಂಬಗಳು ತೀರ್ಮಾನಿಸಿವೆಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net