ಈ ನಕಲಿ ಉಪೇಂದ್ರ ಯಾರು ಹೇಳಿ ನೋಡೋಣ ...

JK Final
Published on

ನಟ-ನಿರ್ದೇಶಕ ಉಪೇಂದ್ರ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಬರೀ ಜನ ಸಾಮಾನ್ಯರಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಹಲವು ನಟರು ಮತ್ತು ನಿರ್ದೇಶಕರು, ಉಪೇಂದ್ರ ಅವರ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಂಥ ಹಲವು ಅಭಿಮಾನಿಗಳ ಪೈಕಿ, ಈ ನಟ ಸಹ ಒಬ್ಬರು.

‘ಉಪೇಂದ್ರ’ ಚಿತ್ರವನ್ನು 25 ಬಾರಿ ನೋಡಿರುವ ಅವರು, ಕೆಲವು ವರ್ಷಗಳ ಹಿಂದೆ ತಾವು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಫ್ಯಾಶನ್ ಶೋ ನಡೆದಾಗ, ‘ಉಪೇಂದ್ರ’ ಚಿತ್ರದಲ್ಲಿನ ಅವರ ಪಾತ್ರದಂತೆ ಡ್ರೆಸ್ ಮಾಡಿಕೊಂಡು ಮಿಂಚಿದ್ದರು. ಇಷ್ಟಕ್ಕೂ ಆ ನಟ ಯಾರು ಗೊತ್ತಾ? ಜೆಕೆ.

‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ದೊಡ್ಡ ಹೆಸರು ಮಾಡಿದ್ದ ಜೆಕೆ, ಆ ನಂತರ ಹಲವು ಚಿತ್ರಗಳಲ್ಲಿ ಹೀರೋ ಆಗಿಯೂ ನಟಿಸಿದ್ದರು. ಇದೀಗ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವ ಅವರು, ತಾವು ಉಪೇಂದ್ರ ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಂಡಿರುವುದಷ್ಟೇ ಅಲ್ಲ, ಉಪೇಂದ್ರರಂತೆ ಡ್ರೆಸ್ ಮಾಡಿಕೊಂಡಿದ್ದ ಫೋಟೋವೊಂದನ್ನು ಇದೀಗ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ನಾನು ಉಪೇಂದ್ರ ಸಾರ್ ಅವರ ಕಟ್ಟಾ ಅಭಿಮಾನಿ. ಕೆಲವು ವರ್ಷಗಳ ಹಿಂದೆ ಪ್ರಾಕ್ಸೇರ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಉಪೇಂದ್ರರಂತೆ ಡ್ರೆಸ್ ಮಾಡಿಕೊಂಡಿದ್ದಾರೆ. ನೀವು ನನ್ನನ್ನು ಬೇಕಾದರೆ, ಉಪೇಂದ್ರ ಅವರ ಹುಚ್ಚು ಅಭಿಮಾನಿ ಎಂದು ಕರೆಯಬಹುದು. ಕಾಮಾಕ್ಯ ಚಿತ್ರಮಂದಿರದಲ್ಲಿ ‘ಉಪೇಂದ್ರ’ ಸಿನಿಮಾ ಬಿಡುಗಡೆಯಾದಾಗ, ಮೊದಲ ದಿನವೇ ನಾಲ್ಕು ಬಾರಿ ನೋಡಿದ್ದೆ. ಇದುವರೆಗೂ 25 ಬಾರಿ ನೋಡಿದ್ದೇನೆ’ ಎಂದು ಜೆಕೆ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net