ಹುಟ್ಟುಹಬ್ಬಕ್ಕೆ ಶುಭ ಹಾರೈಸಿದವರಿಗೆ ಜಪಾನ್​ನಿಂದಲೇ ಥ್ಯಾಂಕ್ಸ್​ ಹೇಳಿದ ರಮ್ಯಾ

Ramya 40
Published on

ಟೋಕಿಯೋ: ಸ್ಯಾಂಡಲ್​ವುಡ್​ ನಟಿ ರಮ್ಯಾಗೆ ಇಂದು 40ರ ಸಂಭ್ರಮ. 1982ರ ನವೆಂಬರ್​ 29ರಂದು ಜನಿಸಿದ ರಮ್ಯಾ, ಇಂದು 40 ಮುಗಿಸಿ 41 ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹುಟ್ಟುಹಬ್ಬವನ್ನು ಅವರು ಜಪಾನ್​ನಲ್ಲಿ ಆಚರಿಸಿಕೊಳ್ಳುತ್ತಿರುವುದು ವಿಶೇಷ.

ಜಪಾನ್​ನ ಫ್ಲೋಟಿಂಗ್​ ಫ್ಲವರ್​ ಗಾರ್ಡ್​ನ್​ನಲ್ಲಿ ಕುಳಿತಿರುವ ತಮ್ಮ ಒಂದಿಷ್ಟು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿರುವ ರಮ್ಯಾ, ತಾವು 40ರ ಕ್ಲಬ್​ ಸೇರಿದ್ದು, ಈ ಸಂದರ್ಭದಲ್ಲಿ ತಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ.

ಅಂದ ಹಾಗೆ, ರಮ್ಯಾ ಅವರ ಹುಟ್ಟುಹಬ್ಬಕ್ಕೆ ಬರೀ ಅಭಿಮಾನಿಗಳಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ಹೇಳಿದ್ದಾರೆ. ಧನಂಜಯ್​, ಕಾರ್ತಿಕ್​ ಗೌಡ, ಅಮೃತಾ ಅಯ್ಯಂಗಾರ್​ ಸೇರಿದಂತೆ ಹಲವು ರಮ್ಯಾ ಅವರ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾ ಮೂಲಕ ವಿಶ್​ ಮಾಡಿದ್ದಾರೆ.

ಇನ್ನು, ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದ ರಮ್ಯಾ, ಇದೀಗ ನಟಿಯಾಗಿ, ನಿರ್ಮಾಪಕಿಯಾಗಿ ವಾಪಸ್ಸಾಗಿದ್ದಾರೆ. ಧನಂಜಯ್​ ಅಭಿನಯದ 'ಹೊಯ್ಸಳ' ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕಂಬ್ಯಾಕ್​ ಮಾಡುತ್ತಿರುವ ರಮ್ಯಾ, ರಾಜ್​ ಬಿ ಶೆಟ್ಟಿ ನಿರ್ದೇಶನದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net