Ramayana Trailer : ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕಲ್ಪನೆಗೂ ಮೀರಿದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್ ರಾಮನ (ರಣಬೀರ್ ಕಪೂರ್) ದಿವ್ಯ ತೇಜಸ್ಸಿಗೆ ಒತ್ತು ನೀಡಿದ್ದರೆ, ಇದೀಗ ಬಿಡುಗಡೆಯಾಗಿರುವ ಟ್ರೈಲರ್ ಸಂಪೂರ್ಣವಾಗಿ ರಾವಣನ (ಯಶ್) ಅಬ್ಬರ, ಗಾಂಭೀರ್ಯ ಮತ್ತು ಬ್ರಹ್ಮಾಂಡದ ಶಕ್ತಿಗೆ ಕನ್ನಡಿ ಹಿಡಿದಿದೆ. ಯಶ್ ಅವರ ಅದ್ಭುತ ನಟನೆ ಮತ್ತು ತೆರೆಯ ಮೇಲಿನ ಅವರ ಖಳನಾಯಕನ ಖದರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.