ಬಂಧಿತ ಶಿಕ್ಷಕಿಯರಾದ ಕಾವ್ಯಾ, ಕೀರ್ತನಾ ಹಾಗೂ ವಿ.ಪಿ. ನಿಷ್ಮಾ, ಕಾಲೇಜು ವಿದ್ಯಾರ್ಥಿಗಳನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಇನ್‌ಸ್ಟಾಗ್ರಾಮ್ ಮೂಲಕ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಇವರು, ಪ್ರೀತಿಯ ಬಲೆಯಲ್ಲಿ ಬೀಳುವಂತೆ ನಾಟಕವಾಡುತ್ತಿದ್ದರು. ಪ್ರಚೋದಾತ್ಮಕ ಮಾತುಗಳನ್ನಾಡುತ್ತಿದ್ದರು. ತಮ್ಮ ದಾರಿಗೆ ಬರುತ್ತಿದ್ದಂತೆ ಯಾರೂ ಅನುಮಾನಪಡದಂತೆ ಫುಡ್ ಡೆಲಿವರಿ ಆ್ಯಪ್ ನೆಪದಲ್ಲಿ ಮಾದಕ ವಸ್ತುಗಳನ್ನು ಅವರಿಗೆ ಪೂರೈಸುತ್ತಿದ್ದರು.