ಈ ನಡುವೆ ಅವರ ಹಾಟ್ ವರ್ಕ್ಔಟ್ ವಿಡಿಯೋವೊಂದನ್ನು ಶೇರ್ ಮಾಡಿ ಬಾಲಿವುಡ್ನ ಇಬ್ಬರು ಸಿನಿತಾರೆಯರಿಗೆ ರಾಕುಲ್ ಒಂದು ಸವಾಲು ಹಾಕಿದ್ದಾರೆ. ವಿಡಿಯೋಗೆ, ''ಇಲ್ಲಿದೆ ಅಟ್ಯಾಕ್ ಚಾಲೆಂಜ್. ಟೈಗರ್ ಶ್ರಾಫ್, ಜಾಕ್ವೆಲಿನ್ ಫರ್ನಾಂಡಿಸ್ ನನ್ನ ಸವಾಲನ್ನು ಸ್ವೀಕರಿಸುತ್ತಾರಾ? ಅಥವಾ ಇಲ್ಲವೇ? ಕಾದು ನೋಡೋಣ'', ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ರಾಕುಲ್ ಮೂರಕ್ಕೂ ಹೆಚ್ಚು ತರಹದ ವರ್ಕ್ಔಟ್ಗಳನ್ನು ವಿಡಿಯೋದಲ್ಲಿ ಮಾಡಿದ್ದಾರೆ. ಅವರ ವಿಡಿಯೋಗೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್, 1,800 ಕ್ಕೂ ಹೆಚ್ಚು ಕಾಮೆಂಟ್ಗಳು ಹರಿದುಬಂದಿವೆ.