

ಬೆಂಗಳೂರು: ’ದಕ್ಷ’ ಮತ್ತು ’ಬಿಂಬ’ ಚಿತ್ರಗಳು ಒಂದೇ ಜಾಗ ಮತ್ತು ಒಂದೇ ಶಾಟ್ನಲ್ಲಿ ಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದಕ್ಕಿಂತ ವಿಭಿನ್ನ ಎನ್ನುವಂತೆ ’ರಕ್ತ ಗುಲಾಬಿ’ ಚಿತ್ರ ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿ ಇಪ್ಪತ್ತೈದು ಸ್ಥಳಗಳಲ್ಲಿ ಒಂದೇ ಶಾಟ್ನಲ್ಲಿ ಶೂಟಿಂಗ್ ಮಾಡಿಕೊಂಡು ದಾಖಲೆ ಬರೆದಿದೆ.
ಇದನ್ನೂ ಓದಿ: ಶಾರುಖ್ ಖಾನ್, ಆಲಿಯಾ ಭಟ್ ಜಂಟಿಯಾಗಿ ಸಿನಿಮಾ ನಿರ್ಮಾಣ…
ಮುಂಜಾನೆ 5.55ಕ್ಕೆ ಕ್ಯಾಮರಾ ಆನ್ ಆಗಿ ನಿರಂತರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ 8.08ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದ ಚಿತ್ರ ಲಿಮ್ಕಾ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನಿಸ್ ದಾಖಲೆಗೆ ನೋಂದಣಿಯಾಗಿದೆ.
ಬ್ಯಾಂಕ್ ಉದ್ಯೋಗಿಯಾಗಿರುವ ರಾಬಿ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಲೋಹಿತ್, ಮಿಷಿನ್ ಕಾಡ್ ಫಿಲಂಸ್ ಮುಖಾಂತರ ಸುಮಾರು ನಲವತ್ತು ಲಕ್ಷ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದು, ಇದೇ ವಾರ ತೆರೆಗೆ ಬರುತ್ತಿದೆ.
ಸಾಮಾಜಿಕ ವ್ಯವಸ್ಥೆಯಿಂದ ಮನನೊಂದ ಯುವಕನೊಬ್ಬ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಮತ್ತೊಂದು ವ್ಯವಸ್ಥೆ ಸೃಷ್ಟಿಸುತ್ತಾನೆ. ಇದರ ಮದ್ಯೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ತನ್ನ ಪ್ರೀತಿ ಉಳಿಸಿಕೊಳ್ಳಲು ದೂರದ ಜಾಗಕ್ಕೆ ತೆರಳುವಾಗ ತನ್ನವರಿಂದಲೂ ಮತ್ತು ಪೋಲೀಸರಿಂದಲೂ ಕಷ್ಟಗಳು ಎದುರಾಗುತ್ತದೆ. ಅದರಿಂದ ಆತ ಪಾರಾಗುವ ಪರಿಯೇ ರಕ್ತಗುಲಾಬಿ.
ಇದನ್ನೂ ಓದಿ: ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!
ರಂಗಭೂಮಿ ಕಲಾವಿದ ವಿಕ್ರಮಾದಿತ್ಯ ನಾಯಕನಾಗಿ ನಟಿಸಿದರೆ, ಶಿವಾನಿ ನಾಯಕಿಯಾಗಿದ್ದಾರೆ. ಮಾಣಿಕ್ಯ ಜಿ.ಎನ್, ಭರತ್, ರಾಮು, ವಿನೋದ್ಕುಮಾರ್, ಸಿದ್ದರಾಮ, ಲೋಹಿತ್ ಕುಲಕರ್ಣಿ, ಪ್ರವೀಣ್ ಬಾಲಗೌಡರ್ ಮುಂತಾದವರು ನಟಿಸಿದ್ದಾರೆ. ಒಂದು ಗೀತೆಗೆ ಪ್ರಜೋತ್ ಡೇಸಾ ಸಂಗೀತ, ರಾವಣನ್ ಛಾಯಾಗ್ರಹಣ, ವಿಜಯ್ಕುಮಾರ್ ಸಂಕಲನ ಮಾಡಿದ್ದಾರೆ.