More

  ಪಾಕಿಸ್ತಾನದಲ್ಲೊಬ್ಬಳು ಐಶ್ವರ್ಯ ರೈ ಹೋಲುವ ಚೆಲುವೆ!

  ಮುಂಬೈ: ನಟ ನಟಿಯರನ್ನು ಹೋಲುವ ಇತರ ವ್ಯಕ್ತಿಗಳು ನಮಗೆ ಎಲ್ಲೊ ಒಂದು ಕಡೆ ಕಾಣಸಿಗುತ್ತಾರೆ. ಅಂತವರಿಗೆ ಸಾಕಷ್ಟು ಜನಮನ್ನಣೆ ಇರುತ್ತದೆ. ನೋಡಿದ ತಕ್ಷಣ ನೀನು ಆ ಹಿರೋ ಥರ ಅತವಾ ಆ ಹಿರೋಯಿನ್ ಥರ ಇದಿಯಾ ಎಂದು ಮೆಚ್ಚುಗೆ ಸೂಚಿಸುತ್ತಾರೆ.

  ಇದೇ ರೀತಿ ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ರೀತಿ ಕಾಣುವ ಕೆಲ ಯುವತಿಯರನ್ನು ಈಗಾಗಲೇ ನೋಡಿದ್ದೇವೆ. ಆದರೆ, ದೂರದ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಹೋಲುವ ಯುವತಿಯೊಬ್ಬಳು ಇಂಟರ್​ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ.

  ಹೌದು ಮೂಲತಃ ಪಾಕಿಸ್ತಾನಿ ಆಗಿರುವ ಸದ್ಯ ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಆಮ್ನಾ ಇಮ್ರಾನ್ ಎನ್ನುವ ಯುವತಿಯೇ ಸಂಚಲನ ಸೃಷ್ಟಿಸಿದವಳು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಮ್ನಾಳನ್ನು ನೋಡಿ ನೆಟ್ಟಿಗರು, ಐಶ್ವರ್ಯ ಝರಾಕ್ಸ ಕಾಪಿ, ಕಾರ್ಬನ್ ಕಾಪಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಚೆಲುವೆ ನೋಡಲು ಐಶ್ವರ್ಯ ಅವರನ್ನೇ ಹೋಲುತ್ತಾಳೆ. ಐಶ್ವರ್ಯ ರೈ ತದ್ರೂಪದಂತೆ ಕಾಣಿಸುತ್ತಿರುವ ಆಮ್ನಾ, ಸದ್ಯ ಇಂಟರನೆಟ್​ನಲ್ಲಿ ಹವಾ ಸೃಷ್ಟಿಸಿದ್ದಾಳೆ.

  ಶಾರುಖ್ ಖಾನ್​, ಆಲಿಯಾ ಭಟ್ ಜಂಟಿಯಾಗಿ ಸಿನಿಮಾ ನಿರ್ಮಾಣ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts