

ಬಾಲಿವುಡ್ನಲ್ಲಿ ಸಾಕಷ್ಟು ನಟಿಯರು ನಟನೆಯ ಜತೆಗೆ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ತೆರೆದು ಅದರಲ್ಲೂ ಬಿಜಿಯಾಗಿದ್ದಾರೆ. ಇದೀಗ ಆ ಸಾಲಿಗೆ ನಟಿ ಆಲಿಯಾ ಭಟ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ನಿರ್ಮಾಣ ಸಂಸ್ಥೆ ತೆರೆದಿರುವ ಆಲಿಯಾ, ಮೊದಲ ಚಿತ್ರವನ್ನೂ ಘೋಷಣೆ ಮಾಡಿದ್ದಾರೆ. ಅದೂ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಜತೆಗೆ ಎಂಬುದು ವಿಶೇಷ!
ಹೌದು, ‘ಡಾರ್ಲಿಂಗ್ಸ್’ ಶೀರ್ಷಿಕೆಯ ಚಿತ್ರವನ್ನು ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಎಂಟರ್ಟೈನ್ವೆುಂಟ್ನಲ್ಲಿ ನಿರ್ಮಾಣ ಮಾಡುವುದಾಗಿ ಸೋಮವಾರ ಘೋಷಿಸಿಕೊಂಡಿದ್ದಾರೆ. ಇದೇ ಚಿತ್ರಕ್ಕೆ ಆಲಿಯಾ ಭಟ್ ನೂತನವಾಗಿ ಶುರುಮಾಡಿರುವ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಅಡಿ ‘ಡಾರ್ಲಿಂಗ್ಸ್’ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಬರೀ ನಿರ್ಮಾಣ ಮಾಡುವುದಷ್ಟೇ ಅಲ್ಲ ಚಿತ್ರದಲ್ಲಿ ನಾಯಕಿಯಾಗಿಯೂ ಆಲಿಯಾ ನಟಿಸಲಿದ್ದಾರೆ.
ಅಂದಹಾಗೆ, ಈ ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗುತ್ತಿದೆ. ನಿರ್ವಪಕಿಯಾಗಿ ಆಲಿಯಾಗಿದು ಮೊದಲ ಸಿನಿಮಾ ಎಂಬುದು ಒಂದೆಡೆ ಯಾದರೆ, ಕತೆ, ಚಿತ್ರಕಥೆ ಬರೆಯುತ್ತಿದ್ದ ಜಸ್ವಿುೕತ್ ರೀನ್ ‘ಡಾರ್ಲಿಂಗ್ಸ್’ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿ ಕೊಂಡಿರುವ ಈ ಚಿತ್ರ, ಇದೇ ತಿಂಗಳಲ್ಲಿ ಶೂಟಿಂಗ್ಗೆ ಸಜ್ಜಾಗಲಿದೆ. 2016ರಲ್ಲಿ ಆಲಿಯಾ ಭಟ್ ನಟಿಸಿದ್ದ ಲವ್ ಯೂ ಜಿಂದಗಿ ಚಿತ್ರಕ್ಕೂ ಶಾರುಖ್ ಬಂಡವಾಳ ಹೂಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. -ಏಜೆನ್ಸೀಸ್