ಮೊದಲು ರಶ್ಮಿಕಾ ಮಂದಣ್ಣ ಅವರ ಜತೆ ಬ್ರೇಕ್ ಮಾಡಿಕೊಂಡ ನಿಶ್ಚಿತಾರ್ಥಕ್ಕೆ, ಮತ್ತೊಂದೆಡೆ ಈ ಹಿಂದೆ ರಮ್ಯಾ ಅವರನ್ನ ಅಭಿಮಾನಿ ಒಬ್ಬ ರಕ್ಷಿತ್ ಅವರನ್ನ ನೀವು ಯಾಕೆ ಮದುವೆಯಾಗ ಬಾರದು ಎಂದು ಕೇಳಿದಾಗ, ಆ ಪ್ರಶ್ನೆಯನ್ನ ರಮ್ಯಾ ಅವರು ರಕ್ಷಿತ್ಗೆ ಟ್ಯಾಗ್ ಮಾಡಿದಕ್ಕೆ. ಇವರಿಬ್ಬರು ಮದುವೆಯಾದರೆ ಎಷ್ಟು ಚಂದ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ದು ಉಂಟು. ಹೌದು, ರಮ್ಯಾ ಅವರು ಮಾರ್ಚ್ ತಿಂಗಳಲ್ಲಿ ಗುಡ್ ನ್ಯೂಸ್ ಕೊಡುತ್ತೇನೆ ಅಂತ ಹೇಳಿರುವುದು, ಜತೆಗೆ ರಕ್ಷಿತ್ ಮುಂದಿನ ವರ್ಷದೊಳಗೆ ಮದುವೆಯಾಗುತ್ತಾರೆ ಅಂತ ಜ್ಯೋತಿಷಿ ಹೇಳಿರೋದು, ಇದೆಲ್ಲವನ್ನ ತಾಳೆ ಹಾಕಿ ನೋಡೋದಾದರೆ, ಇವರಿಂದ ಏನಾದರೂ ಗುಡ್ ನ್ಯೂಸ್ ಸಿಗಬಹುದಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.