ಸಪ್ತಸಾಗರದಾಚೆ ಟ್ರೇಲರ್​ ಬಿಡುಗಡೆ ; ಭಾವನೆಗಳ ಅಲೆಯಲ್ಲಿ ರತ್​ ಶೆಟ್ಟಿ, ರುಕ್ಮಿಣಿ ವಸಂತ್​ ಪಯಣ

Sapta Sagaradaache Ello_(218)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಬಳಿಕ ನಟ ರಕ್ಷಿತ್​ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್​ ರಾವ್​ ಮತ್ತೆ ಒಂದಾಗಿರುವ ಚಿತ್ರ "ಸಪ್ತ ಸಾಗರದಾಚೆ ಎಲ್ಲೋ'. ಸೆ. 1ರಂದು ಸೈಡ್​ ಎ ಹಾಗೂ ಅ. 20ರಂದು ಸೈಡ್​ ಬಿ, ಹೀಗೆ ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೆ ಅಭಿಮಾನಿಗಳೇ ಚಿತ್ರತಂಡದ ಜತೆ ಟ್ರೇಲರ್​ ಬಿಡುಗಡೆ ಮಾಡಿದರು. ಹೇಮಂತ್​, "10 ವರ್ಷಗಳ ಹಿಂದೆ ಈ ಕಥೆ ಬರೆದಿದ್ದು. ಶೂಟಿಂಗ್​ ಸಮಯದಲ್ಲಿ ಕರೊನಾ ಲಾಕ್​ಡೌನ್​ ಎದುರಾದ ಕಾರಣ, ಕಥೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಎರಡು ಭಾಗಗಳಲ್ಲಿ ಸಿನಿಮಾ ಮಾಡಬಹುದು ಅಂತನ್ನಿಸಿತು. ರತ್​ ಶೆಟ್ಟಿ ಕೂಡ ಒಪ್ಪಿಕೊಂಡರು. ಎರಡೂ ಚಿತ್ರಗಳು ಭಾವನೆಗಳ ತೀವ್ರತೆಯಿರುವ ಕವಿತೆಯಂತಿವೆ. ಹೀಗಾಗಿಯೇ ಮೊದಲ ಚಿತ್ರ ರಿಲೀಸ್​ ಆದ ಏಳು ವಾರಗಳಲ್ಲಿ ಎರಡನೇ ಭಾಗವನ್ನೂ ರಿಲೀಸ್​ ಮಾಡುತ್ತಿದ್ದೇವೆ' ಎಂದರು.

ನಾಯಕ ರಕ್ಷಿತ್​, "ನಾನು ಪ್ರತಿ ಸಿನಿಮಾ ಮಾಡುವಾಗಲೂ ಹಿಂದಿನ ಚಿತ್ರದ ಇಮೇಜ್​ನಿಂದ ಹೊರಬರುವಂತಹ ಪಾತ್ರ ಮಾಡಲು ಯತ್ನಿಸುತ್ತಿರುತ್ತೇನೆ. ಈ ಚಿತ್ರದ ಬಳಿಕ ನಿರ್ದೇಶನದತ್ತ ಹೆಚ್ಚು ಗಮನ ಹರಿಸಲಿದ್ದೇನೆ' ಎಂದು ಹೇಳಿಕೊಂಡರು. ನಾಯಕಿ ರುಕ್ಮಿಣಿ ವಸಂತ್​, "ಚಿತ್ರದ ಪೋಸ್ಟರ್​ ನೋಡಿ ನಾನೇ ಇನ್​ಸ್ಟಾಗ್ರಾಂನಲ್ಲಿ ಹೇಮಂತ್​ ಅವರಿಗೆ ಮೆಸೇಜ್​ ಮಾಡಿದ್ದೆ. ಆಡಿಷನ್​ ಮಾಡಿದರು, ಆಯ್ಕೆಯಾದೆ' ಎಂದು ಸಂತಸ ವ್ಯಕ್ತಪಡಿಸಿದರು.

ಮತ್ತೊಬ್ಬ ನಾಯಕಿ ಚೈತ್ರಾ ಆಚಾರ್​, "ನಾನು ಸೈಡ್​ ಎನಲ್ಲಿಲ್ಲ. ಸೈಡ್​ ಬಿನಲ್ಲಿದ್ದೇನೆ. ಆದರೆ, ಮೊದಲ ಭಾಗದ ಕೆಲ ತುಣುಕುಗಳನ್ನು ನೋಡಿದ್ದೇನೆ, ತುಂಬ ಚೆನ್ನಾಗಿ ಮೂಡಿಬಂದಿದೆ' ಎಂದರು. ಸಂಗೀತ ನಿರ್ದೇಶಕ ಚರಣ್​ ರಾಜ್​ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇ ಅದೃಷ್ಟವೆಂದರು. ಛಾಯಾಗ್ರಾಹಕ ಅದ್ವೆ$$ೃತ್​ ಚಿತ್ರೀಕರಣದ ಸಮಯದಲ್ಲಿ ಹಲವು ಬಾರಿ ರಕ್ಷಿತ್​ ಪರ್ಫಾಮೆನ್ಸ್​ ನೋಡಿ ತಾವೂ ಕಣ್ಣೀರು ಹಾಕಿದ ಬಗ್ಗೆ ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net