

ಮುಂಬೈ: ಮಾಡೆಲ್ಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳ ನಿರ್ಮಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ 14 ದಿನ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ಕಿಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಳೆದ ವಾರ ರಾಜ್ ಬಂಧನವಾದ ನಂತರ ಆತನ ಪರವಾಗಿ ಮಾತನಾಡಿದ ಮೊದಲಿಗರೆಂದರೆ ಅದು ರಾಖಿ ಸಾವಂತ್. ಈಗಲೂ ರಾಜ್ ಪರವಾಗಿ ನಿಂತಿರುವ ರಾಖಿ, ಯಾರೂ ಸಹ ಯಾರಿಂದಲೂ ಒತ್ತಾಯಪೂರ್ವಕವಾಗಿ ಈ ತರಹದ ಚಿತ್ರಗಳನ್ನು ಮಾಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಅವರು, 'ನಾನು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವಾಗಿಯೂ ಇಲ್ಲ. ಯಾರೂ ಸಹ ಇನ್ನೊಬ್ಬರ ತಲೆಯ ಮೇಲೆ ಗನ್ ಇಟ್ಟು ಅಶ್ಲೀಲ ಚಿತ್ರಗಳನ್ನು ಮಾಡಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಯಾರನ್ನೂ ದೂಷಿಸಬೇಡಿ. ನೀವು ಏನು ಕೊಡುತ್ತೀರೋ, ಅದನ್ನು ಜನ ತೆಗೆದುಕೊಳ್ಳುತ್ತಾರೆ. ಯಾರೂ ಸಹ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಇದೊಂಉ ಸ್ವತಂತ್ರ ದೇಶ ಮತ್ತು ಜನ ಇಲ್ಲಿ ಎಲ್ಲಾ ತರಹದ ಕೆಲಸಗಳನ್ನೂ ಮಾಡುತ್ತಾರೆ. ಈ ತರಹ ಚಿತ್ರಗಳನ್ನು ಇನ್ನೂ ಎಷ್ಟೋ ಜನ ಮಾಡುತ್ತಾರೆ. ಆದರೆ, ರಾಜ್ ಕುಂದ್ರಾ ಮಾತ್ರ ಯಾಕೆ ಟಾರ್ಗೆಟ್ ಆಗುತ್ತಿದ್ದಾರೆ? ಬಹುಶಃ ಅವರು ಶಿಲ್ಪಾ ಶೆಟ್ಟಿ ಗಂಡ ಎಂಬ ಕಾರಣಕ್ಕೆ ಮತ್ತು ಒಬ್ಬ ಸೆಲೆಬ್ರಿಟಿಯಾಗಿರುವುದಕ್ಕೆ ಎಲ್ಲರೂ ಅವರನ್ನು ಟಾರ್ಗೆಟ್ ಮಾಡುತ್ತಿರಬಹುದು. ಹಾಗಂತ ಅವರು ಮುಗ್ಧ ಎಂದು ಹೇಳುತ್ತಿಲ್ಲ' ಎನ್ನುತ್ತಾರೆ ರಾಖಿ.