

ಮುಂಬೈ: ಮಾಡೆಲ್ಗಳನ್ನು ಬಳಸಿಕೊಂಡು ಪೋರ್ನ್ ವಿಡಿಯೋಗಳ ನಿರ್ಮಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಿಕ್ಕಿಬಿದ್ದಿರುವ ವಿಷಯ ಗೊತ್ತೇ ಇದೆ. ರಾಜ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ಕಿಲಾ ನ್ಯಾಯಾಲಯ ಆದೇಶ ಹೊರಡಿಸಿರುವುದು ಸಹ ಸುದ್ದಿಯಾಗಿದೆ.
ಹೊಸ ಸುದ್ದಿ ಏನೆಂದರೆ, ರಾಜ್ರಿಂದಾಗಿ ತಲೆ ಎತ್ತಿ ಓಡಾಡುವುದು ಬಹಳ ಕಷ್ಟವಾಗಿದೆ ಎಂದು ಶಿಲ್ಪಾಗೆ ಸಿಕ್ಕಾಪಟ್ಟೆ ಬೇಸರವಾಗಿದೆಯಂತೆ. ರಾಜ್ ಮಾಡಿದ ಕೃತ್ಯದಿಂದ ಶಿಲ್ಪಾಗೆ ಬಹಳ ಅವಮಾನವಾಗಿದ್ದು, ಇತ್ತೀಚೆಗೆ ಶಿಲ್ಪಾ ಪೊಲೀಸರೆದುರೇ ತಮ್ಮ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ಅದಾಗಿ ನಾಲ್ಕು ದಿನಗಳ ನಂತರ ಶಿಲ್ಪಾ ಶೆಟ್ಟಿ ಅವರನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ರಾಜ್ ಕುಂದ್ರಾ ಅವರನ್ನು ಮನೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ, ಶಿಲ್ಪಾ ಸಿಕ್ಕಾಪಟ್ಟೆ ರೇಗಾಡಿದರಂತೆ. ಇವೆಲ್ಲ ಮಾಡುವ ಅವಶ್ಯಕತೆ ಏನಿತ್ತು ಎಂದು ತರಾಟೆಗೆ ತೆಗೆದುಕೊಂಡರಂತೆ.
ರಾಜ್ ಅವರನ್ನು ನೋಡುತ್ತಿದ್ದಂತೆಯೇ ಶಿಲ್ಪಾ ಅಳುವುದಕ್ಕೆ ಪ್ರಾರಂಭಿಸಿದರು ಎಂದು ಹೇಳಲಾಗುತ್ತಿದೆ. 'ನಮ್ಮ ಬಳಿ ಎಲ್ಲವೂ ಇದೆ. ಆದರೂ ಇವೆಲ್ಲ ಮಾಡುವ ಅವಶ್ಯಕತೆ ಏನಿತ್ತು?' ಎಂದು ಖಡಕ್ ಆಗಿ ಪ್ರಶ್ನಿಸಿದರು ಎಂದು ಹೇಳಲಾಗುತ್ತಿದೆ. ಇದರಿಂದ ತಮ್ಮ ಮನೆತನದ ಗೌರವ ಹಾಳಾಗಿದೆ, ಅವಕಾಶಗಳು ಕಡಿಮೆಯಾಗುತ್ತಿವೆ, ಎಲ್ಲಕ್ಕಿಂತ ಹೆಚ್ಚಾಗಿ ತಲೆ ಎತ್ತಿಕೊಂಡು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಲ್ಪಾ ಈ ಸಂದರ್ಭದಲ್ಲಿ ಪತಿಯ ಎದುರು ಸಿಕ್ಕಾಪಟ್ಟೆ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಇದೆ.
ಈ ಪ್ರಕರಣದಲ್ಲಿ ಶಿಲ್ಪಾ ಅವರ ಕೈವಾಡ ಕಂಡುಬರದ ಕಾರಣ, ಅವರನ್ನು ಒಂದೆರೆಡು ಬಾರಿ ವಿಚಾರಣೆಗೆ ಒಳಪಡಿಸಿ, ವಾಪಸ್ಸು ಕಳುಹಿಸಲಾಗಿದೆ.