

ಬೆಂಗಳೂರು: ಬಿಗ್ಬಾಸ್ ಸೀಸನ್ 8 ಈ ವಾರ ಅತ್ಯಂತ ಕುತೂಹಲಕಾರಿಯಾಗಿ ಸಾಗುತ್ತಿದೆ. ಐವರು ನಾಮಿನೇಟ್ ಆಗಿದ್ದು, ಯಾವ ಕ್ಷಣದಲ್ಲಾದರೂ ಒಬ್ಬರನ್ನು ಯಾರಿಗೂ ತಿಳಿಯದಂತೆ ಬಿಗ್ಬಾಸ್ ಮನೆಯಿಂದ ಹೊರಗೆ ಕರೆಯುತ್ತಾರೆ ಎನ್ನಲಾಗಿತ್ತು. ಅದರಂತೆ ಇದೀಗ ನಡೆದಿದ್ದು, ಅನೇಕ ಕೊನೆಗೂ ಆ ಒಬ್ಬ ಕಂಟೆಸ್ಟೆಂಟ್ ಮನೆಯಿಂದ ಹೊರಗೆ ಬಂದಿದ್ದಾರೆ.
ಹೌದು. ನಾವೀಗ ಹೇಳುತ್ತಿರುವುದು ನಿಮ್ಮಲ್ಲಿ ಬಹುತೇಕರು ಅಂದಾಜು ಮಾಡಿರುವ ಸ್ಪರ್ಧಿಯ ಬಗ್ಗೆಯೇ. ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಾಗಿನಿಂದಲೂ ಒಂದಿಲ್ಲೊಂದು ವಿಚಾರದಲ್ಲಿ ಮನೆ ಮಂದಿಯ, ಕಿಚ್ಚ ಸುದೀಪನ ಹಾಗೂ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದ ಚಕ್ರವರ್ತಿ ಚಂದ್ರಚೂಡ್ ಫಿನಾಲೆಗೆ ಎರಡು ವಾರವಿರುವಾಗ ಮನೆಯಿಂದ ಹೊರಬಂದಿದ್ದಾರೆ. ಮಧ್ಯ ರಾತ್ರಿಯಲ್ಲಿ ಬಿಗ್ಬಾಸ್ ಅವರನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ. ಬಹುತೇಕ ಪ್ರತಿ ವಾರದ ನಾಮಿನೇಷನ್ನಲ್ಲಿ ಕೇಳಿಬರುತ್ತಿದ್ದ ಹೆಸರಿನಲ್ಲಿ ಒಬ್ಬರಾಗಿದ್ದ ಚಕ್ರವರ್ತಿ ಕೊನೆಗೂ ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಟೆಲಿಫೋನ್ ಬೂತ್ ಹಾಕಿರುವ ಬಿಗ್ಬಾಸ್ ಮಧ್ಯ ರಾತ್ರಿಯಲ್ಲಿ ನಾಮಿನೇಟ್ ಆಗಿರುವ ಒಬ್ಬೊಬ್ಬರನ್ನೇ ಫೋನ್ ಮೂಲಕ ಮಾತನಾಡಿಸಲಾರಂಭಿಸುತ್ತಾರೆ. ಮಾತನಾಡಿದ ನಂತರ ಇನ್ನೆರೆಡು ನಿಮಿಷದಲ್ಲಿ ಮುಖ್ಯ ದ್ವಾರ ನಿಮ್ಮೆದುರು ಓಪನ್ ಆದರೆ, ನೀವು ಔಟ್ ಆಗಿದ್ದೀರೆಂದು ಎನ್ನುತ್ತಾರೆ. ಅದನ್ನು ಕೇಳಿಸಿಕೊಂಡ ಪ್ರಶಾಂತ್ ಸಂಬರಗಿ ದುಃಖ ತಡೆಯಲಾಗದೆ ಕಣ್ಣೀರನ್ನೂ ಹಾಕುತ್ತಾರೆ.
ಮೂಲಗಳ ಪ್ರಕಾರ ಅದರಲ್ಲಿ ಚಕ್ರವರ್ತಿ ಚಂದ್ರಚೂಡ್ಗೆ ಮುಖ್ಯ ದ್ವಾರ ತೆಗೆದಿದೆ ಎನ್ನಲಾಗಿದೆ. ಚಂದ್ರಚೂಡ್ ಯಾವ ಗೇಟ್ ಮೂಲಕ ವೈಲ್ಡ್ ಎಂಟ್ರಿ ಕೊಟ್ಟಿದ್ದರೋ ಅದೇ ಗೇಟ್ನಿಂದ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಅವರು ಮನೆಯಿಂದ ಹೋಗಿದ್ದಕ್ಕೆ ಮನೆಯವರ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ಇಂದಿನ ಎಪಿಸೋಡ್ನಲ್ಲಿಯೇ ನೋಡಬೇಕಿದೆ. (ಏಜೆನ್ಸೀಸ್)