

ಮುಂಬೈ: ಸಿನಿಮಾ ಲೋಕದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವವರ ಪೈಕಿ ಮೊದಲ ಸ್ಥಾನ ರಾಖಿ ಸಾವಂತ್ಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ರಾಖಿ ಈ ಬಾರಿ ಒಳ್ಳೆಯ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ಡ್ಯಾನ್ಸರ್ ಕೂಡ ಆಗಿರುವ ರಾಖಿಗೆ ನನಗೆ ಯಾವಾಗಲೂ ಇದೊಂದೇ ಪಾತ್ರದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ. ಏಕೆ ಹೀಗೆ ಎಂಬುದು ಗೊತ್ತಿಲ್ಲ. ನನಗೆ ಉತ್ತಮ ನಟನೆ ಬರುತ್ತೆ, ಒಂದೊಳ್ಳೆ ಅವಕಾಶ ಕೊಡಿ ಎಂದು ಹಲವು ಬಾರಿ ಕೇಳಿಕೊಂಡರೂ ಯಾರೂ ಕೊಡುವುದೇ ಇಲ್ಲ ಎಂದು ರಾಖಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ರಾಖಿ ಬೇಸರಪಟ್ಟುಕೊಳ್ಳುವಷ್ಟು ಪದೇ ಪದೇ ಕೊಡುವ ಪಾತ್ರ ಯಾವುದು ಎಂದರೆ ಅದುವೇ... ಚುಂಬನದ ದೃಶ್ಯವಂತೆ, ಹೀಗಂತ ರಾಖಿ ಹೇಳಿಕೊಂಡಿದ್ದಾರೆ.
ಯಾವಾಗಲೂ ಯಾವ ನಿರ್ದೇಶಕರೂ, ನಿರ್ಮಾಪಕರೂ ಕರೆದರೂ ಈ ದೃಶ್ಯವನ್ನೇ ಮಾಡಿ ಎನ್ನುತ್ತಾರೆ. ಎಲ್ಲರೂ ನಮ್ಮ ಬಗ್ಗೆ ಒಳ್ಳೆಯದನ್ನು ಮಾತನಾಡಿದರೆ ನಮಗೆ ಮಧುಮೇಹ ಬರಬಹುದು, ನಮ್ಮ ಜೀವನದಲ್ಲಿಯೂ ಒಂದಿಷ್ಟು ಕಹಿ ಬೇವು ಇರಬೇಕು ಹಾಗಾಗಿ ನಾನು ಸದಾ ಟ್ರೋಲ್ನಲ್ಲಿರಲು ಇಷ್ಟಪಡುತ್ತೇನೆ ಎಂದಿದ್ದಾರೆ.
ನಾನು ಬದಲಾಗಲ್ಲ, ಬದಲಾಗುವುದೂ ಇಲ್ಲ, ನಾನು ಹೇಗಿದ್ದೆನೋ ಹಾಗೆಯೇ ಇರುತ್ತೇನೆ. ನಾನು ಯಾರನ್ನೂ ನೋಯಿಸುವುದಿಲ್ಲ ಮತ್ತೆ ನಾನು ಪ್ರಾಮಾಣಿಕಳು ಹಾಗೂ ಮನರಂಜನೆ ನೀಡುವವಳು ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)