ಬಾಲಿವುಡ್​ ನಟಿ ರಾಖಿ ಸಾವಂತ್​ ಬಂಧನ; ಯಾಕೆ ಗೊತ್ತಾ?

Rakhi Sawant 1
Published on

ಮುಂಬೈ: ರಾಖಿ ಸಾವಂತ್​ ಇತ್ತೀಚೆಗಷ್ಟೇ ಆದಿಲ್ ಖಾನ್ ದುರಾನಿ ಎಂಬಾತನನ್ನು ಮದುವೆಯಾಗಿರುವ ಸುದ್ದಿಯೊಂದು ಬಂದಿತ್ತು. ಅಷ್ಟೇ ಅಲ್ಲ, ಇಸ್ಲಾಂಗೆ ಧರ್ಮಕ್ಕೆ ರಾಖಿ ಸಾವಂತ್​​ ಮತಾಂತರಗೊಂಡ ಸುದ್ದಿಯೂ ಹೊರಬಿದ್ದಿತ್ತು. ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ರಾಖಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ರಾಖಿ ಸಾವಂತ್​ ಮದುವೆಯಾಗುವುದಕ್ಕೂ, ಮತಾಂತರಗೊಳ್ಳುವುದಕ್ಕೂ ಮತ್ತು ಅವರ ಬಂಧನವಾಗುವುದಕ್ಕೂ ಯಾವುದೇ ಸಂಬಂಧಿವಿಲ್ಲ. ಮುಂಬೈನ ಅಂಬೋಲಿ ಪೊಲೀಸರು ರಾಖಿಯನ್ನು ಬಂಧಿಸಿರುವುದಕ್ಕೆ ಬೇರೆಯದೇ ಕಾರಣವಿದೆ.

ರಾಖಿ ವಿರುದ್ಧ ಮಾಡೆಲ್​ ಒಬ್ಬರು ದೂರು ನೀಡಿದ್ದಾರೆ. ತನ್ನ ಅನುಮತಿ ಇಲ್ಲದೆ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಅಂಬೋಲಿ ಪೊಲೀಸರು ರಾಖಿಯನ್ನು ಬಂಧಿಸಿದ್ದು, ಆಕೆಯ ವಿಚಾರಣೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ, ಕಳೆದ ವರ್ಷ ರಾಖಿ ಮತ್ತು ಆಕೆಯ ಲಾಯರ್​ ಫಲ್ಘುಣಿ ಬ್ರಹ್ಮಭಟ್​ ವಿರುದ್ಧ ಎಫ್​.ಐ.ಆರ್​ ದಾಖಲಾಗಿತ್ತು. ಸಮಾರಂಭದಲ್ಲಿ ಅವರಿಬ್ಬರೂ ತಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net