ಸ್ಯಾಂಡಲ್​ವುಡ್​ ನಟ ಧನುಷ್​ ನಿಧನ; ಇಂದು ಅಂತ್ಯಕ್ರಿಯೆ

Dhanush - Final
Published on

ಬೆಂಗಳೂರು: 'ಪ್ಯಾರ್​ ಕಾ ಗೋಲ್​ಗುಂಬಜ್​', 'ಕೊಟ್ಲಲ್ಲಪ್ಪೋ ಕೈ', 'ಸಂಪಿಗೆ ಹಳ್ಳಿ', 'ಸ್ನೇಹಿತ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಧನುಷ್​, ಬುಧವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಧನುಷ್​ ಮೂಲತಃ ಬಾಗಲಕೋಟೆಯವರು. ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನಟಿಸಬೇಕು ಎಂಬ ಆಸೆ ಹೊತ್ತು, ಬೆಂಗಳೂರಿಗೆ ಬಂದಿದ್ದರು. ಒಂದಿಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದರು. ಆದರೆ, ಆ ಚಿತ್ರಗಳು ಹೆಚ್ಚು ಯಶಸ್ವಿಯಾಗದ ಕಾರಣ ಅವರು ಸುದ್ದಿಯಾಗಲಿಲ್ಲ.

ಕಳೆದ ವಾರ ಧನುಷ್​, ಚಿತ್ರವೊಂದರ ಚಿತ್ರೀಕರಣಕ್ಕಾಗಿ ಲಡಾಖ್​ಗೆ ಹೋಗಿದ್ದರು. ಅಲ್ಲಿನ ಹವಾಮಾನದ ವೈಪರಿತ್ಯದಿಂದ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ತಕ್ಷಣವೇ ಅವರು ಬೆಂಗಳೂರಿಗೆ ವಾಪಸ್ಸು ಕರೆತರಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಅವರು ಬುಧವಾರ ರಾತ್ರಿ 10.45ರ ಸುಮಾರಿಗೆ ನಿಧನರಾಗಿದ್ದಾರೆ.

ಧನುಷ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಇಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net