More

    ‘ಪಠಾಣ್​’ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು?

    ಮುಂಬೈ: ಶಾರುಖ್​ ಖಾನ್​ ನಾಲ್ಕು ವರ್ಷಗಳ ನಂತರ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ‘ಕಿಂಗ್​ ಖಾನ್​’ ಅಭಿನಯದ ‘ಪಠಾಣ್​’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದು, ಜನವರಿ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಸಾವಿನ ಬಗ್ಗೆ ಮಾತು​…. ಅಭಿಮಾನಿಗಳನ್ನು ಚಿಂತೆಗೀಡುಮಾಡಿದ ಉರ್ಫಿ ಜಾವೇದ್​ ಟ್ವೀಟ್!

    ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾದ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂದು ಆ ನಂತರ ಲೆಕ್ಕಾಚಾರ ಇರುತ್ತದೆ. ಆದರೆ, ‘ಪಠಾಣ್’ ಬಿಡುಗಡೆಗೂ ಮುನ್ನವೇ, ಚಿತ್ರ ಮೊದಲ ದಿನ ಎಷ್ಟು ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

    ಮೂಲಗಳ ಪ್ರಕಾರ, ‘ಪಠಾಣ್​’ ಮೊದಲ ದಿನ ಭಾರತದಲ್ಲಿ 40 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರವೊಂದು ಇಷ್ಟು ಗಳಿಕೆ ಮಾಡುವುದು ದೊಡ್ಡ ವಿಷಯವೇ. ಆದರೆ, ‘ಪಠಾಣ್​’ ಚಿತ್ರ 40 ಕೋಟಿ ರೂ. ಗಳಿಕೆ ಮಾಡುತ್ತದೆ ಎಂಬ ನಿರೀಕ್ಷೆ ಇದೆಯಾದರೂ, ಅದು ಕಡಿಮೆ ಎಂಬುದು ಬಾಲಿವುಡ್​ ಪಂಡಿತರ ನಂಬಿಕೆ. ಏಕೆಂದರೆ, ಇದಕ್ಕೂ ಮುನ್ನ ಶಾರುಖ್​ ಖಾನ್​ ಅಭಿನಯದ ‘ಹ್ಯಾಪಿ ನ್ಯೂ ಇಯರ್​’ ಚಿತ್ರವು ಮೊದಲ ದಿನ 44 ಕೋಟಿ ಗಳಿಕೆ ಮಾಡಿದೆಯಂತೆ. ಅದಕ್ಕೆ ಹೋಲಿಸಿದರೆ, ‘ಪಠಾಣ್​’ ಗಳಿಕೆ ಸಹಜವಾಗಿಯೇ ಕಡಿಮೆಯಾಗುತ್ತದೆ.

    ಒಂದು ಕಡೆ ಚಿತ್ರಕ್ಕೆ ನೆಗೆಟಿವ್​ ಪ್ರಚಾರ ಹೆಚ್ಚಿದೆಯಾದರೂ, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಕಾರಣ, ಟ್ರೈಲರ್​ನಲ್ಲಿನ ಆಕ್ಷನ್​ ದೃಶ್ಯಗಳು. ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಯಾವುದೇ ಚಿತ್ರದಲ್ಲೂ ಇರದಂತಹ ಮೈನವಿರೇಳಿಸುವಂತಹ ಆಕ್ಷನ್​ ದೃಶ್ಯಗಳು ಈ ಚಿತ್ರದಲ್ಲಿವೆಯಂತೆ. ಹಾಗಾಗಿ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಅದಕ್ಕೆ ಸರಿಯಾಗಿ, ಮೊದಲ ದಿನ ಇಡೀ ದೇಶದಲ್ಲಿ ದೊಡ್ಡ ಮಟ್ಟಿಗೆ ಚಿತ್ರ ಓಪನಿಂಗ್​ ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಇದನ್ನೂ ಓದಿ: ದುಬೈನಲ್ಲಿ ರಿಷಭ್​ ಶೆಟ್ರ ಅಡ್ವೆಂಚರ್​! ಡಿವೈನ್​ ಸ್ಟಾರ್​ಗೆ ಇದು ಫ್ಯಾಮಿಲಿ ಟೈಮ್​

    ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

    ಭಾರತದಲ್ಲಿ ನಾನೇ ಸರ್ವಾಧಿಕಾರಿ ಎಂದ ರಾಜಮೌಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts