ಆಕ್ಸಿಜನ್ ಹಂಚೋಕೆ ಕಂಗನಾಗೆ ಹೇಳಿ: ರಾಖಿ ಸಾವಂತ್

Rakhi Sawant - Final
Published on

ಮುಬೈ: ರಾಖಿ ಸಾವಂತ್ ಯಾವತ್ತೂ ತಮ್ಮ ಹರಿತವಾದ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಾ ಬಂದಿದ್ದಾರೆ. ಕೆಲವೊಮ್ಮೆ ತಮ್ಮ ಮಾತುಗಳಿಂದ ಸಾಕಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ರಾಖಿ, ನೇರವಾಗಿ ಕಂಗನಾ ರಣಾವತ್‌ಗೆ ಟಾಂಗ್ ಕೊಟ್ಟಿದ್ದಾರೆ.

ಇತ್ತೀಚೆಗೆ ರಾಖಿ ಸಾವಂತ್ ಮನೆ ಎದುರು ಒಂದಿಷ್ಟು ಪಾಪರಾಜಿಗಳು ನಿಂತಿದ್ದಾರೆ. ರಾಖಿ ಮನೆಯಿಂದ ಹೊರಬರುವುದನ್ನು ನೋಡಿ, ಹೋಗಿ ಅವರನ್ನು ಮಾತಾಡಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಖಿಯ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ಮಧ್ಯೆ, ಕಂಗನಾ ಹೇಳಿದ ಮಾತೊಂದನ್ನು ಪ್ರಸ್ತಾಪಿಸಿ, ಆ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಸದ್ಯದ ದೇಶದ ಪರಿಸ್ಥಿತಿ ಸರಿ ಇಲ್ಲ, ಎಲ್ಲೂ ಆಕ್ಸಿಜನ್ ಸಿಗುತ್ತಿಲ್ಲ ಎಂದು ಕಂಗನಾ ಹೇಳಿದ್ದು, ಆ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಖಿ, `ಏನು ಆಕ್ಸಿಜನ್ ಸಿಗುತ್ತಿಲ್ಲವಾ? ಕಂಗನಾ, ದಯವಿಟ್ಟು ದೇಶಕ್ಕೆ ಒಂದಿಷ್ಟು ಸೇವೆ ಮಾಡಿ. ನಿಮ್ಮ ಹತ್ತಿರ ಬಹಳ ಬಹಳ ಹಣ ಇದೆ. ಆಕ್ಸಿಜನ್ ಖರೀದಿಸಿ, ಅದನ್ನು ಜನರಿಗೆ ಹಂಚಿ' ಎಂದು ಕಂಗನಾಗೆ ರಾಖಿ ಹೇಳಿದ್ದಾರೆ.

ರಾಖಿ ತಮ್ಮ ಬಗ್ಗೆ ಆಡಿರುವ ಮಾತು, ಕಂಗನಾ ಕಿವಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ಕಿವಿಗೆ ಬಿದ್ದ ಮೇಲೆ, ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net