

ಮುAಬೈ: ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ ಇಲ್ಲದೆ ಇಂದಿಗೆ ಒಂದು ವರ್ಷ. ಕಳೆದ ವರ್ಷ ಇದೇ ದಿನ ಅಂದರೆ, ಏಪ್ರಿಲ್ ೨೯ಕ್ಕೆ ಇರ್ಫಾನ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಸುಧೀರ್ಘ ಎರಡು ವರ್ಷಗಳ ಕಾಲ ಕ್ಯಾನ್ಸರ್‌ನಿಂದ ಬಳಲಿದ ಅವರು, ಕೊನೆಗೆ ಕಳೆದ ವರ್ಷ ಇದೇ ದಿನದಂದು ಕೊನೆಯುಸಿರೆಳೆದಿದ್ದರು.
ಈಗ ಅವರ ವಿಷಯವಾಗಿ ಒಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಅದೇನೆಂದರೆ, `ಅಮರೋಸ್ ಪೆರೋಸ್', `ಬಾಬೆಲ್', `೨೧ ಗ್ರಾಮ್ಸ್', `ಬರ್ಡ್ಮ್ಯಾನ್', `ದಿ ರಿವಿನೆಂಟ್' ಮುಂತಾದ ಜನಪ್ರಿಯ ಚಿತ್ರಗಳ ಖ್ಯಾತಿಯ ಅಂತಾರಾಷ್ಟಿçÃಯ ನಿರ್ದೇಶಕ ಅಲೆಜಾಂಡ್ರೋ ಗೊನ್ಸಾಲಿಸ್ ಇನರಿಟ್ಟು ಜತೆಗೆ ಇರ್ಫಾನ್ ಖಾನ್ ಒಂದು ಚಿತ್ರವನ್ನು ಮಾಡಬೇಕಿತ್ತಂತೆ. ಹಾಗಂತ ಖುದ್ದು ಇರ್ಫಾನ್ ಅವರ ಮಡದಿ ಸುತಾಪಾ ಸಿಕ್ದರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊAದರಲ್ಲಿ ಮಾತನಾಡಿರುವ ಅವರು, ಅಲೆಜಾಂಡ್ರೋಗೆ ತಮಗೆ ಇರ್ಫಾನ್ ಜತೆಗೆ ಸಿನಿಮಾ ಮಾಡುವ ಆಸೆ ಇರುವುದಾಗಿ ಮೀರಾ ನಾಯರ್‌ಗೆ ಹೇಳಿಕೊಂಡಿದ್ದರAತೆ. ಮೀರಾ ನಾಯರ್, ಇರ್ಫಾನ್ ಖಾನ್ ಅಭಿನಯದಲ್ಲಿ `ದಿ ನೇಮ್‌ಸೇಕ್' ಎಂಬ ಚಿತ್ರ ಮಾಡಿದ್ದರು. ಆ ಚಿತ್ರದ ನಂತರ ಇರ್ಫಾನ್ ಕ್ಯಾನ್ಸರ್‌ಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಇರ್ಫಾನ್ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಈ ವಿಷಯವನ್ನು ಅವರಿಗೆ ಮೀರಾ ಹೇಳಲಿಲ್ಲವಂತೆ. ಅದರ ಬದಲು ಒಮ್ಮೆ ಸಿಕ್ಕಾಗ, ಸುತಾಪಾಗೆ ಈ ವಿಷಯ ತಿಳಿಸಿದ್ದರಂತೆ. ತಮ್ಮ ಜತೆಗೆ ಕೆಲಸ ಮಾಡಬೇಕೆಂದು ಅಂತಾರಾಷ್ಟಿçÃಯ ಖ್ಯಾತಿಯ ನಿರ್ದೇಶಕರೊಬ್ಬರು ಆಸೆಪಟ್ಟಿದ್ದರು ಎಂದು ಕೊನೆಗೂ ಗೊತ್ತಾಗದೇ ಇರ್ಫಾನ್ ಹೋಗಿಬಿಟ್ಟರು ಎಂದು ಸುತಾಪಾ ಬೇಸರ ವ್ಯಕ್ತಪಡಿಸಿದ್ದಾರೆ. ತಾನಾದರೂ ಈ ವಿಷಯವನ್ನು ಅವರಿಗೆ ಹೇಳಬೇಕಿತ್ತು ಎಂದು ಸುತಾಪಾ ಹೇಳಿದ್ದಾರೆ.
ಇರ್ಫಾನ್ ಸಾಯುವುದಕ್ಕಿಂತ ಒಂದೂವರೆ ತಿಂಗಳ ಮುಂಚೆಯಷ್ಟೇ, `ಅಂಗ್ರೇಜಿ ಮೀಡಿಯಂ' ಎಂಬ ಅವರ ಅಭಿನಯದ ಚಿತ್ರ ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಷ್ಟರಲ್ಲೇ ಲಾಕ್‌ಡೌನ್ ಘೋಷಣೆಯಾಯಿತು. ಅದೇ ಅವರ ಕೊನೆಯ ಚಿತ್ರವಾಗಿ ಹೋಯಿತು.