More

    ಕೋವಿಡ್ ಹೋರಾಟಕ್ಕೆ ಫಂಡ್‌ರೇಸರ್ ಪ್ರಾರಂಭಿಸಿದ ಪ್ರಿಯಾಂಕಾ

    ಲಡನ್: ಭಾರತಕ್ಕೆ ಕರೊನಾ ಎರಡನೆಯ ಅಲೆ ದೊಡ್ಡ ಆಘಾತ ಹೆಚ್ಚಿದ್ದು, ಇದರಿಂದ ದೇಶದಲ್ಲಿ ಸಾವು-ನೋವು ಹೆಚ್ಚಿದೆ. ಭಾರತದಲ್ಲಿ ಕೋವಿಡ್ ಸೃಷ್ಟಿಸಿರುವ ಆತಂಕವನ್ನು ಮಟ್ಟ ಹಾಕುವುದಕ್ಕೆ ವಿದೇಶದಲ್ಲಿ ನೆಲೆಸಿರುವ ಹಲವು ಭಾರತೀಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಿಯಾಂಕಾ ಚೋಪ್ರಾ, ಗೀವ್‌ಇಂಡಿಯಾ ಜೊತೆಗೆ ಸೇರಿ ಒಂದು ಫಂಡ್‌ರೇಸರ್ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡುವುದಕ್ಕೆ ಅವರು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್: ರಾಮು ಬೆನ್ನಲ್ಲೇ ಮತ್ತೊಬ್ಬ ನಿರ್ಮಾಪಕ ಸಾವು

    ಈ ವಿಷಯವಾಗಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ, `ಭಾರತದಲ್ಲಿ ಕರೊನಾ ಎರಡನೆ ಅಲೆ ದೊಡ್ಡ ಆತಂಕ ಸೃಷ್ಟಿಸಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಹಾಸಿಗೆಗಳ ಕೊರತೆ ಹೆಚ್ಚಾಗಿದೆ. ಲಸಿಕೆ ಮತ್ತು ಔಷಧಿಗಳ ಕೊರತೆಯೂ ಹೆಚ್ಚುತ್ತಿದೆ ಎಂದು ಕೇಳಿದ್ದೇನೆ. ಭಾರತ ಇಂತಹ ಕಷ್ಟದ ಸಮಯದಲ್ಲಿರುವಾಗ, ಜಗತ್ತಿನಾದ್ಯಂತ ನೆಲೆಸಿರುವ ಭಾರತೀಯರು ತಮ್ಮ ಕೈಲಾದ ಸಹಾಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಗಿವ್‌ಇಂಡಿಯಾ ಜೊತೆಗೆ ನಿಧಿಸಂಗ್ರಹಣೆಯಲ್ಲಿ ಕೈಜೋಡಿಸಿದ್ದೇನೆ. ಈ ಫಂಡ್‌ರೈಸರ್‌ಗೆ ಕೈಲಾದಷ್ಟು ಸಹಾಯ ಮಾಡಿ. ಅಗತ್ಯವಿರುವವರಿಗೆ ಈ ನಿಧಿ ತಲುಪುತ್ತದೆ’ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕಂಗನಾ ಸಿನಿ ಬದುಕಿಗೆ 15 ವರ್ಷ

    ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ, ಭಾರತಕ್ಕೆ ಅಗತ್ಯ ನೆರವು ನೀಡುವುದಕ್ಕೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಿಯಾಂಕಾ ಮನವಿ ಸಲ್ಲಿಸಿದ್ದರು. `ನನ್ನ ದೇಶಕ್ಕೆ ಇದೀಗ ಸಹಾಯದ ಅಗತ್ಯವಿದೆ. ದಯವಿಟ್ಟು, ಈ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಿ. ಅಗತ್ಯಕ್ಕಿಂತ ಹೆಚ್ಚು ಲಸಿಕೆಗಳನ್ನು ಭಾರತಕ್ಕೆ ಮರಳಿಸಿ’ ಎಂದು ಅವರು ಟ್ವೀಟ್ ಮೂಲಕ ಅಮೇರಿಕಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.

    ಕಾಶ್ಮೀರದಲ್ಲಿ ರೆಮೋ: ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts