ಕಾಶ್ಮೀರದಲ್ಲಿ ರೆಮೋ: ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಅಂತ್ಯ

ಬೆಂಗಳೂರು: ಒಂದು ಕಡೆ ಜನತಾ ಕರ್ಫ್ಯೂ ಮತ್ತು ಲಾಕ್​ಡೌನ್​ನಿಂದ ಹಲವು ಚಿತ್ರತಂಡಗಳು ಚಿತ್ರೀಕರಣ ನಿಲ್ಲಿಸಿದರೆ, ಇನ್ನೊಂದು ಕಡೆ ‘ರೆಮೋ’ ಚಿತ್ರತಂಡ ಕಾಶ್ಮೀರದಲ್ಲಿ ಹಾಡಿನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿತ್ತು. ಈಗ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಪವನ್ ಒಡೆಯರ್ ನಿರ್ದೇಶನದ ‘ರೆಮೋ’ ಚಿತ್ರದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆ ಹಾಡಿನ ಚಿತ್ರೀಕರಣಕ್ಕೆ ಕಳೆದ ವಾರ ಚಿತ್ರತಂಡವು ಕಾಶ್ಮೀರಕ್ಕೆ ಹೋಗಿತ್ತು. ಪವನ್ ಒಡೆಯರ್, ಇಶಾನ್, ಆಶಿಕಾ ರಂಗನಾಥ್ ಸೇರಿದಂತೆ 30 ಜನರ … Continue reading ಕಾಶ್ಮೀರದಲ್ಲಿ ರೆಮೋ: ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಅಂತ್ಯ