ರಜನಿಕಾಂತ್​-ದೀಪಿಕಾ ಪಡುಕೋಣೆ ರೊಮ್ಯಾನ್ಸ್

Deepika
Published on

ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2014ರಲ್ಲಿ ‘ಕೊಚಾಡಿಯನ್’ ಎಂಬ ಎನಿಮೇಷನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಏಳು ವರ್ಷದ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ರಜನಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಈ ಸುದ್ದಿಗೆ ಇನ್ನಷ್ಟೇ ಅಧಿಕೃತ ಮುದ್ರೆ ಬೀಳಬೇಕಿದೆ. ಈ ಹಿಂದೆ ಕಾಲಿವುಡ್​ನಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿದ್ದ ದೇಸಿಂಗ್ ಪೆರಿಯಸ್ವಾಮಿ ಈ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಪಕ್ಕಾ ರಜನಿ ಶೈಲಿಯ ಈ ಸಿನಿಮಾದಲ್ಲಿ ಬಾಲಿವುಡ್ ನಟಿಯನ್ನು ಕರೆತರುವ ಪ್ಲಾನ್ ನಡೆದಿತ್ತು. ಅದರಂತೆ ದೀಪಿಕಾಗೆ ಚಿತ್ರತಂಡ ಆಫರ್ ನೀಡಲಾಗಿದೆಯಂತೆ. ಮೂಲಗಳ ಪ್ರಕಾರ, ದೀಪಿಕಾ ಜತೆ ಈಗಾಗಲೇ ಒಂದು ಹಂತದ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ನವೆಂಬರ್ 4ರಂದು ರಜನಿಕಾಂತ್ ನಟಿಸಿರುವ ‘ಅಣ್ಣಾತ್ತೆ’ ಚಿತ್ರ ಬಿಡುಗಡೆ ಆಗಲಿದೆ. ಅದಾದ ಬಳಿಕ ಈ ಸಿನಿಮಾದ ಕೆಲಸಗಳು ಆರಂಭವಾಗಲಿವೆ. ಇತ್ತ ನಾಗಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗುವುದರ ಜತೆಗೆ, ಹೃತಿಕ್ ಅಭಿನಯದ ‘ಫೈಟರ್’ ಚಿತ್ರವನ್ನೂ ದೀಪಿಕಾ ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net