ಆರ್​ಆರ್​ಆರ್ ಕೈಬಿಟ್ಟ ರಾಜಮೌಳಿ, ಮಹೇಶ್​ ಬಾಬು ಸಲುವಾಗಿ ಫಾರ್ಮ್​ಹೌಸ್​ ಸೇರಿದ್ದೇಕೆ?

babu-1587225201
Published on

ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಮುಗಿಸಿಕೊಂಡಿರುವ ಆರ್​ಆರ್​ಆರ್ ಚಿತ್ರತಂಡ, ಇನ್ನೇನು ಮಿಕ್ಕ ಶೂಟಿಂಗ್​ ಶುರುಮಾಡಿಕೊಳ್ಳಲು ಅಣಿಯಾಗಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಅದು ಮುಂದೂಡುತ್ತಲೇ ಬಂದಿತು. ಇನ್ನೇನು ಶೂಟಿಂಗ್​ಗೆ ಚಾಲನೆ ಸಿಕ್ಕಿತು ಎನ್ನುವಷ್ಟರಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಮತ್ತೆ ವಿಳಂಬವಾಯಿತು. ಹಾಗಾಗಿ ರಾಜಮೌಳಿ ಸದ್ಯ ಆರ್​ಆರ್​ಆರ್​ ಸಿನಿಮಾ ಕಯ ಬಿಟ್ಟು ಫಾರ್ಮ್​ ಹೌಸ್​ನತ್ತ ನಡೆದಿದ್ದಾರೆ!

ಹೌದು, ಲಾಕ್​ಡೌನ್​ ಅವಧಿಯಲ್ಲಿಯೇ ಆರ್​ಆರ್​ಆರ್ ಸಿನಿಮಾದ ಕೆಲಸಗಳ ಜತೆಗೆ ಮಹೇಶ್ ಬಾಬು ಜತೆಗಿನ ಸಿನಿಮಾವನ್ನೂ ಘೋಷಣೆ ಮಾಡಿದ್ದರು ರಾಜಮೌಳಿ. ಅಭಿಮಾನಿಗಳಿಗೂ ಈ ಸುದ್ದಿ ಖುಷಿಯ ಜತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಮಹೇಶ್ ಬಾಬು ಸಿನಿಮಾದತ್ತ ದೃಷ್ಟಿಹಾಯಿಸಿದ್ದಾರೆ ರಾಜಮೌಳಿ. ಹೈದರಾಬಾದ್​ ಬಳಿಕ ನೆರಕೆಟ್​ಪಲ್ಲಿ ಫಾರ್ಮ್​ಹೌಸ್​ನಲ್ಲಿ ಕುಟುಂಬದ ಜತೆ ತಂಗಿದ್ದು, ಆ ಚಿತ್ರದ ಬಗ್ಗೆಯೇ ಹೆಚ್ಚು ಕೆಲಸ ಮಾಡುತ್ತಿದ್ದಾರಂತೆ.

ಈಗಾಗಲೇ ಮಹೇಶ್ ಬಾಬು ಜತೆಗಿನ ಸಿನಿಮಾದ ಬಹುತೇಕ ಚಿತ್ರಕತೆ ಕೊನೇ ಹಂತಕ್ಕೆ ಬಂದಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರದ ಪೂರ್ತಿ ಸ್ಕ್ರಿಪ್ಟ್ ಸಿದ್ಧವಾಗಲಿದೆಯಂತೆ. ಅದರ ಜತೆಗೆ ಇನ್ನುಳಿದ ಪಾತ್ರವರ್ಗದ ಆಯ್ಕೆಯನ್ನೂ ಮಾಡಿಕೊಂಡು, ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಲಿದ್ದಾರೆ. ಇನ್ನು ಕೆಲ ದಿನಗಳು ಕಳೆದಂತೆ ಆರ್​​ಆರ್​ಆರ್​ ಚಿತ್ರದ ಶೂಟಿಂಗ್​ಗೆ ಚಾಲನೆ ನೀಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net