ರಾಗಿಣಿ ಹುಟ್ಟುಹಬ್ಬದ ಸ್ಪೆಷಾಲಿಟಿ ಇದು ...

Ragini Final
Published on

ಮೂರು ದಿನಗಳ ಹಿಂದಷ್ಟೇ, ಅಂದರೆ ಮೇ 24ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ರಾಗಿಣಿ. ಆದರೆ, ಈ ವರ್ಷದ ಅವರ ಹುಟ್ಟುಹಬ್ಬದ ಸ್ಪೆಷಾಲಿಟಿ ಏನು ಎಂಬುದನ್ನು ಅವರು ಕೆಲವು ೆಟೋಗಳ ಮೂಲಕ ಹಂಚಿಕೊಂಡಿದ್ದಾರೆ.

ಪ್ರತೀ ವರ್ಷ, ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸುತ್ತಿದ್ದರು ರಾಗಿಣಿ. ತಮ್ಮ ಹುಟ್ಟುಹಬ್ಬಕ್ಕೆ ಮಾಧ್ಯಮ ಮಿತ್ರರನ್ನೂ ಆಹ್ವಾನಿಸುತ್ತಿದ್ದರು. ಈ ಬಾರಿ ಲಾಕ್‌ಡೌನ್ ಇದ್ದ ಕಾರಣ, ಅವರು ತಮ್ಮ ಮನೆಯಲ್ಲೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಷ್ಟಕ್ಕೂ ಈ ಬರ್ಥ್‌ಡೇ ಸ್ಪೆಷಾಲಿಟಿ ಏನು ಗೊತ್ತಾ?

ಈ ಬಾರಿ ಅವರ ಸಹೋದರ ಬರ್ಥ್‌ಡೇ ಕೇಕ್ ತಯಾರಿಸಿದ್ದರಂತೆ. ರಾಗಿಣಿ ಅವರ ಹುಟ್ಟುಹಬ್ಬಕ್ಕೆ ಮನೆಯನ್ನು ವಿಶೇಷವಾಗಿ ಸಿಂಗರಿಸಿದ್ದ ಅವರ ಸಹೋದರ, ಬರ್ಥ್‌ಡೇ ಕೇಕ್ ಸಹ ಸಿದ್ಧಪಡಿಸಿದ್ದರಂತೆ. ಅದು ತಮ್ಮ ಫೇವರೇಟ್ ಕೇಕ್ ಎಂದು ಹೇಳಿಕೊಂಡಿದ್ದಾರೆ ರಾಗಿಣಿ.

ಇನ್ನು ಅವರು ತಯಾರಿಸಿದ ಕೇಕ್ ಜತೆಗೆ, ಇನ್ನೊಂದು ಕೇಕ್ ಸಹ ತಂದಿಟ್ಟಿದ್ದರಂತೆ. ಜತೆಗೆ ನೂಡಲ್ಸ್ ಸೇರಿದಂತೆ ಹಲವು ಖಾದ್ಯಗಳನ್ನು ಮನೆಯಲ್ಲೇ ಸಿದ್ಧಪಡಿಸಿ, ಮನೆಯವರೆಲ್ಲಾ ಸಂಭ್ರಮಪಟ್ಟರಂತೆ. ಅಷ್ಟೇ ಅಲ್ಲ, ಹಳೆಯ ಹಾಡುಗಳನ್ನು ಹಾಡುವುದರ ಜತೆಗೆ, ಹಾಡುಗಳಿಗೆ ಹೆಜ್ಜೆ ಹಾಕಿ ಪಾರ್ಟಿ ಮಾಡಿದ್ದಾರೆ ರಾಗಿಣಿ ಮನೆಯವರು.

‘ಇಲ್ಲಿಂದ ಹೊಸ ಜರ್ನಿ ಶುರುವಾಗಿದೆ’ ಎಂದು ಬರೆದುಕೊಂಡಿರುವ ರಾಗಿಣಿ, ಮುಂದಿನ ದಿನಗಳನ್ನು ಹೊಸ ಅವಕಾಶಗಳು ಮತ್ತು ಸವಾಲುಗಳಿಗಾಗಿ ಎದುರು ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net