

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಜನ್ಮದಿನದ ನಿಮಿತ್ತ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹಾಡಿನ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ. ಹಾಗಂತ ಪುನೀತ್ ಕಂಠದಲ್ಲಿ ಹಾಡು ಹೊರಬಂದಿಲ್ಲ. ಬದಲಿಗೆ, ವಿಜಯ್ ಅವರೇ ಹಾಡಿದ ‘ಮಣ್ಣಿನ ದೋಣಿ’ ಚಿತ್ರದ ’ಮೇಘ ಬಂತು ಮೇಘ..‘ ಹಾಡನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು, ಹ್ಯಾಪಿ ಬರ್ತ್ಡೇ ರಾಘು ಎಂದು ವಿಶ್ ಮಾಡಿದ್ದಾರೆ. ಹಾಗಾದರೆ, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ ಗಾಯನದ ವಿಡಿಯೋ ಇಲ್ಲಿದೆ. ನೀವು ಒಂದು ಬಾರಿ ಕೇಳಿ. ಇಷ್ಟವಾಗಬಹುದು...