More

    ವೈಲ್ಡ್ ಕರ್ನಾಟಕಕ್ಕೆ ಧ್ವನಿಯಾದ ರಿಷಬ್!

    ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ‘ರುದ್ರಪ್ರಯಾಗ’ ಚಿತ್ರದ ಬರವಣಿಗೆ ಕೆಲಸದಲ್ಲಿ ಬಿಜಿಯಾಗಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ್ದಾರೆ.

    ಭಾರತದ ಮೊಟ್ಟಮೊದಲ ವನ್ಯಜೀವಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ಮತ್ತು ಕಲ್ಯಾಣ ವರ್ವ ಎನ್ನುವವರು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ದೇಶನ ಮಾಡಿದ್ದಾರೆ. ಗ್ರಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಸಾಕ್ಷ್ಯಚಿತ್ರದ ಚಿತ್ರೀಕರಣವು ಮೂರು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ತಂಡವು ಕರ್ನಾಟಕದ ಉದ್ದಗಲಕ್ಕೂ ಓಡಾಡಿ, 400 ಗಂಟೆಗಳ ಕಾಲ ಚಿತ್ರೀಕರಣ ಮಾಡಿತ್ತು. ಒಂದು ಗಂಟೆ ಅವಧಿಯ ಸಾಕ್ಷ್ಯಚಿತ್ರವು ಇದೀಗ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಅದಕ್ಕೂ ಮುನ್ನ ರಿಷಬ್ ಧ್ವನಿ ನೀಡಿದ್ದಾರೆ.

    ‘ಕರ್ನಾಟಕದ ಅರಣ್ಯ ಪ್ರದೇಶ, ಪ್ರಾಣಿ-ಪಕ್ಷಿಗಳ ಕುರಿತಾಗಿ ಮಾಹಿತಿ ನೀಡುವ ಅಪರೂಪದ ಸಾಕ್ಷ್ಯಚಿತ್ರ ಇದು. ಇಂಥದ್ದೊಂದು ಸಾಕ್ಷ್ಯಚಿತ್ರಕ್ಕೆ ನಿರೂಪಣೆ ಮಾಡಿದ್ದು, ಹೆಮ್ಮೆಯ ವಿಷಯ. ಇದರ ಇಂಗ್ಲಿಷ್ ಅವತರಣಿಕೆಗೆ ಸರ್ ರಿಚರ್ಡ್ ಅಟೆನ್​ಬರೋ ಧ್ವನಿಯಾಗಿದ್ದರು. ಕನ್ನಡದ ಸಾಕ್ಷ್ಯಚಿತ್ರಕ್ಕೆ ನಾನು ನಿರೂಪಣೆ ಮಾಡಿದ್ದೇನೆ. ಹಿಂದಿಗೆ ರಾಜಕುಮಾರ್ ರಾವ್ ಧ್ವನಿಯಾದರೆ, ತೆಲುಗು ಮತ್ತು ತಮಿಳು ವರ್ಷನ್​ಗಳಿಗೆ ಪ್ರಕಾಶ್ ರೈ ಮಾತನಾಡಿದ್ದಾರೆ’ ಎನ್ನುತ್ತಾರೆ ರಿಷಬ್ ಶೆಟ್ಟಿ. ‘ವೈಲ್ಡ್ ಕರ್ನಾಟಕ’ ಸಾಕ್ಷ್ಯಚಿತ್ರವು ಡಿಸ್ಕವರಿ ಚಾನಲ್​ನಲ್ಲಿ ಜೂನ್ ಐದರಂದು ರಾತ್ರಿ ಎಂಟಕ್ಕೆ ಪ್ರಸಾರವಾಗಲಿದೆ.

    ಮಹಿಳೆಯ ಉಗುರಿನಲ್ಲೂ ‘ಕೆಜಿಎಫ್​’ ಕ್ರೇಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts