ಇಲ್ಲಿದೆ ನೋಡಿ ಅಪ್ಪು ಬಾಲ್ಯ; ಮಕ್ಕಳ ದಿನಾಚರಣೆ ಮತ್ತು ಅಪ್ಪು ಮಗನೆ..

1189688
Published on

ಬೆಂಗಳೂರು: ನಾಡಿನ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾನ ದಾರಿಯಲ್ಲಿ ಜಾರಿ ಹೋಗಿ ದಿನಗಳು ಉರುಳಿವೆ. ಅವರಿಲ್ಲದ ಮೊದಲ ಮಕ್ಕಳ ದಿನಾಚರಣೆಯಂದು ಅವರ ಇಡೀ ಬಾಲ್ಯವನ್ನು ಕಣ್ಮುಂದೆ ತಂದಿಡುವ ಪ್ರಯತ್ನವೂ ಆಗಿದೆ.

ಬಾನ ಜಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ, ಮಿನುಗು ತಾರೆ ಎಂದ ಎಂಬ ಹಾಡನ್ನು ಒಳಗೊಂಡ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟ-ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅಪ್ಪು ಮಗನೆ ಎನ್ನುವ ಶೀರ್ಷಿಕೆಯೊಂದಿಗೆ ಅದನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಪುನೀತ್ ರಾಜಕುಮಾರ್​ ಬಾಲನಟನಾಗಿ ಅಭಿನಯಿಸಿದ್ದ ಸಿನಿಮಾ ದೃಶ್ಯಗಳು ಹಾಗೂ ಅವರ ಬಾಲ್ಯದ ಅಪರೂಪದ ಅತ್ಯಾಕರ್ಷಕ ಫೋಟೋಗಳನ್ನು ಅವರು ಹಂಚಿಕೊಂಡಿದ್ದು, ಈ ಮೂಲಕ ಮಕ್ಕಳ ದಿನಾಚರಣೆಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net