Video: ಯಶ್ ಮಕ್ಕಳ ಆಟ ನೋಡಿ!

Yash Children - Final
Published on

ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಳೆದ ವಾರವಷ್ಟೇ, ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಯಶ್ ಮತ್ತು ಮಗನ ಫೋಟೋ ಹಂಚಿಕೊಂಡು, ‘ಮೈ ಫೇವರೇಟ್ ಬಾಯ್ಸ್​ ...’ ಎಂದು ಬರೆದುಕೊಂಡಿದ್ದರು.

ಇದೀಗ ರಾಧಿಕಾ ಪಂಡಿತ್ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐರಾ, ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡುವ, ಆತನೊಂದಿಗೆ ಆಟವಾಡುವ ದೃಶ್ಯಗಳಿವೆ. ಈ ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ವಿಡಿಯೋ ಹಂಚಿಕೊಂಡಿರುವ ರಾಧಿಕಾ ಪಂಡಿತ್, ‘ಇವತ್ತಿಗೆ ಐರಾಗೆ ಒಂದೂವರೆ ವರ್ಷಗಳು ತುಂಬಿವೆ. ನಮ್ಮ ಬೇಬಿ ಸಿಟ್ಟರ್ ನಿಮ್ಮ ಮುಖದಲ್ಲಿ ನಗು ತಂದಿದ್ದಾಳೆ ಎಂದು ಭಾವಿಸುವೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು ಯಶ್ ಮತ್ತು ರಾಧಿಕಾ ಪಂಡಿತ್ ಮಗನಿಗೆ ಆರು ತಿಂಗಳು ಈಗಾಗಲೇ ತುಂಬಿದ್ದು, ಲಾಕ್‌ಡೌನ್ ನಂತರ ನಾಮಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net