ಅಂದಾಹಾಗೆ, ನಟಿ ಭಾಗ್ಯಶ್ರೀ ಮತ್ತು ನಟ ಕೃಷ್ಣಂ ರಾಜು ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇದೇ ವರ್ಷದ ಮಾರ್ಚ್ 11 ರಂದು ತೆರೆಗಪ್ಪಳಿಸಲಿದೆ. ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಅನ್ನು ಶೇರ್ ಮಾಡಿಕೊಂಡ ನಟ ಪ್ರಭಾಸ್, “11.03.22. ನಾನು ನಿಮ್ಮನ್ನು ನೋಡಲು ರೆಡಿ ಇದ್ದೇನೆ. #RadheShyamOnMarch11,' ಎಂಬ ಕ್ಯಾಪ್ಷನ್ ನೀಡಿದ್ದಾರೆ.