

ಮುಂಬೈ: ಸಲ್ಮಾನ್ ಖಾನ್ ಅಭಿನಯದ `ರಾಧೇ' ಚಿತ್ರವು ಮೇ ೧೩ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ದುಬೈ ಮುಂತಾದ ದೇಶಗಳ ಚಿತ್ರಮಂದಿರಗಳಲ್ಲಿ ಈ ಚಿತ್ರವು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಭಾರತದಲ್ಲಿ ಹಲವೆಡೆ ಲಾಕ್‌ಡೌನ್ ಇರುವುದರಿಂದ ಅದೇ ದಿನ ಜೀ೫ ಮತ್ತು ಜೀಪ್ಲೆಕ್ಸ್ ಓಟಿಟಿಗಳಲ್ಲೂ ಬಿಡುಗಡೆಯಾಗುತ್ತಿದೆ. ಅಲ್ಲದೆ ಡಿಶ್, ಡಿ೨ಎಚ್, ಟಾಟಾ ಸ್ಕೆöÊ, ಏರ್‌ಟೆಲ್ ಡಿಜಿಟಲ್ ಟಿವಿ ಮುಂತಾದ ಡಿಟಿಎಚ್‌ಗಳಲ್ಲಿ ಪ್ರತಿ ವೀಕ್ಷಣೆಗೆ ೨೪೯ ರೂ.ಗಳನ್ನು ಕೊಟ್ಟು ಮನೆಯಲ್ಲಿ ಕುಳಿತೇ ನೋಡಬಹುದು.
ಇದನ್ನೂ ಓದಿ: ಮೇಘಾ ರೈಡಿಂಗ್! ಹಿರಿತೆರೆ ಬಗ್ಗೆ ನಟಿಯ ಮನದಾಳ
ಈ ಮಧ್ಯೆ, ಚಿತ್ರವು ಸಲ್ಮಾನ್ ಖಾನ್ ವೃತ್ತಿಜೀವನದಲ್ಲೇ ಹೊಸ ದಾಖಲೆಯೊಂದನ್ನು ಮಾಡಿದೆ. ಇತ್ತೀಚೆಗಷ್ಟೇ ಚಿತ್ರವು ಸೆನ್ಸಾರ್ ಆಗಿದ್ದು, `ಯು/ಎ' ಪ್ರಮಾಣಪತ್ರ ಸಿಕ್ಕಿದೆ. ಸ್ವಾರಸ್ಯಕರ ವಿಷಯವೆಂದರೆ, ಈ ಚಿತ್ರವು ಸಲ್ಮಾನ್ ಖಾನ್ ಅವರ ಇದುವರೆಗಿನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಅವಧಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಒಂದು ಗಂಟೆ ೫೪ ನಿಮಿಷಗಳ ಅವಧಿಯದ್ದಾಗಿದೆ.
ಇದಕ್ಕೂ ಮುನ್ನ, ಸಲ್ಮಾನ್ ಖಾನ್ ಅಭಿನಯದ `ಮಾರಿಗೋಲ್ಡ್' ಮತ್ತು `ಮೇ ಔರ್ ಮಿಸಸ್ ಖನ್ನಾ' ಚಿತ್ರಗಳು ಸಹ ಎರಡು ಗಂಟೆಗಿAತ ಕಡಿಮೆ ಅವಧಿಯದ್ದಾಗಿತ್ತು. ಆದರೆ, `ರಾಧೇ' ಚಿತ್ರವು ಆ ಎರಡು ಚಿತ್ರಗಳ ದಾಖಲೆಯನ್ನೂ ಮುರಿದು, ಸಲ್ಮಾನ್ ಕೆರಿಯರ್‌ನಲ್ಲೇ ಕಡಿಮೆ ಅವಧಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು, ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಚಿತ್ರವನ್ನು ನೋಡಿ ಏಪ್ರಿಲ್ ೨೬ರಂದೇ ಚಿತ್ರಕ್ಕೆ ಪ್ರಮಾಣಪತ್ರ ನೀಡಿದೆ. ಇನ್ನು, ಚಿತ್ರ ಬಿಡುಗಡೆಯಾಗುವುದೊಂದೇ ಬಾಕಿ.
`ದಬಾಂಗ್ ೩' ನಂತರ ಸಲ್ಮಾನ್ ಅಭಿನಯದ ಯಾವೊಂದು ಚಿತ್ರ ಸಹ ಇದುವರೆಗೂ ಬಿಡುಗಡೆಯಾಗಿಲ್ಲ. `ರಾಧೇ' ಚಿತ್ರವು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಚಿತ್ರವು ಈ ವರ್ಷ ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಸಲ್ಮಾನ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದ್ದು, ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ.
`ರಾಧೆ' ಚಿತ್ರದಲ್ಲಿ ಸಲ್ಮಾನ್, ದಿಶಾ, ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸಿದ್ದು, ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಫಿಲಂಸ್ ಬ್ಯಾನರ್‌ನಡಿ, ಈ ಚಿತ್ರವನ್ನು ಅವ ಸಹೋದರ ಸೊಹೈಲ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.