ಚಂದನ್ ಶೆಟ್ಟಿ ಜತೆ ಮಂಗ್ಲಿ ಹಾಡು

Mangli
Published on

‘ರಾಬರ್ಟ್’ ಸಿನಿಮಾ ತೆಲುಗು ಅವತರಣಿಕೆಯ ‘ಕಣ್ಣೇ ಅದಿರಿಂದಿ..’ ಹಾಡಿನ ಮೂಲಕ ತೆಲುಗಿನಲ್ಲಷ್ಟೇ ಅಲ್ಲದೆ ಕನ್ನಡದಲ್ಲಿಯೂ ಮನೆಮಾತಾದವರು ಗಾಯಕಿ ಮಂಗ್ಲಿ. ಇತ್ತೀಚೆಗಷ್ಟೇ ‘ಕರಿಯಾ ಐ ಲವ್ ಯೂ’ ಅನ್ನೋ ಚಿತ್ರದಲ್ಲಿ ಹಾಡೊಂದಕ್ಕೆ ಮಂಗ್ಲಿ ಧ್ವನಿಯಾಗಿದ್ದರು.

ಇದೀಗ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕೂ ಅವರ ಆಗಮನವಾಗಿದೆ.

ಚಿತ್ರದ ಟೈಟಲ್ ಟ್ರಾ್ಯಕ್​ಗೆ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಧ್ವನಿ ನೀಡಿದ್ದು, ಅವರೊಂದಿಗೆ ಮಂಗ್ಲಿ ಸಹ ಕಂಠದಾನ ಮಾಡಲಿದ್ದಾರೆ.

*****************

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net