

ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ನಟಿ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನಮ್ಮ ಮೆಟ್ರೋದಲ್ಲಿ ಸುತ್ತಾಡಿ ಬಂದಿದ್ದರು. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಿದ್ದಾರೆ.
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ವೀರಂ ಸಿನಿಮಾ ಸಲುವಾಗಿ ಕಾಸ್ಟ್ಯೂಮ್ ಖರೀದಿ ಮಾಡಲು ಇಡೀ ತಂಡ ತೆರಳಿತ್ತು. ಒಂದಷ್ಟು ಹೊತ್ತು ಇಡೀ ಮಾರುಕಟ್ಟೆಯನ್ನು ಸುತ್ತಾಡಿ ಬೇಕಾದ ಬಟ್ಟೆಗಳನ್ನು ಖರೀದಿ ಮಾಡಿದ್ದಾರೆ.
ಈ ರೀತಿಯ ಶಾಪಿಂಗ್ ಮಾಡುತ್ತಿರುವುದರ ಬಗ್ಗೆ ಮಾತನಾಡಿದ ರಚಿತಾ, ಇದೊಂದು ಹೊಸ ರೀತಿ ಅನುಭವ. ಈ ಮೊದಲು ಮೆಟ್ರೋದಲ್ಲಿ ಈ ರೀತಿ ಸುತ್ತಾಡಿದ್ದೆ. ಇದೀಗ ಅದೇ ರೀತಿ ಕಮರ್ಷಿಯಲ್ ಸ್ಟ್ರೀಟ್ನಲ್ಲಿದ್ದೇವೆ. ನನ್ನನ್ನು ಯಾರು ಗುರುತಿಸುತ್ತಿಲ್ಲ. ಸಿನಿಮಾಗಾಗಿ ಶಾಪಿಂಗ್ ಬಂದಿದ್ದೇವೆ. ಇಡೀ ಚಿತ್ರತಂಡ ಇಲ್ಲಿದೆ’ ಎಂದು ಎಲ್ಲರನ್ನು ಪರಿಚಯ ಮಾಡಿಕೊಟ್ಟಿದ್ದಾರೆ.