More

    ಸೂಪರ್​ಸ್ಟಾರ್​ ರಜಿನಿಕಾಂತ್​ ಆಸ್ಪತ್ರೆಗೆ ದಾಖಲು

    ಚೆನ್ನೈ: ರಕ್ತದೊತ್ತಡದಲ್ಲಿ ತೀವ್ರ ಏರಿಳಿತದ ಸಮಸ್ಯೆಯಿಂದ ಸೂಪರ್​ಸ್ಟಾರ್​ ರಜಿನಿಕಾಂತ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.

    ರಜಿನಿಕಾಂತ್​ ಅವರು ಚೆನ್ನೈ ಹೊರ ವಲಯದ ಫಾರ್ಮ್​ ಹೌಸ್​ನಲ್ಲಿ ಪ್ರತ್ಯೇಕವಾಗಿದ್ದರು. ತಮ್ಮ ಅಭಿನಯದ ‘ಅಣ್ಣಾತ್ತೆ’ ಚಿತ್ರತಂಡದ ನಾಲ್ವರಲ್ಲಿ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಜಿನಿಕಾಂತ್​ ಪ್ರತ್ಯೇಕವಾಗಿದ್ದರು.

    ಇದನ್ನೂ ಓದಿ: ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

    ಇದೀಗ ರಕ್ತದೊತ್ತಡದಲ್ಲಿ ಏರಿಳಿತದ ಸಮಸ್ಯೆಯಿಂದ ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ರಜಿನಿ ಅವರಿಗೆ ಕರೊನಾ ನೆಗಿಟಿವ್​ ವರದಿಯಾಗಿತ್ತು.

    ರಜನಿಕಾಂತ್​ ಅವರು ‘ಅಣ್ಣಾತ್ತೆ’ ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್​ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್​ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.

    ಇಷ್ಟಕ್ಕೂ ರಜನಿಕಾಂತ್​ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್​ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.

    ಇದನ್ನೂ ಓದಿ: ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

    ‘ಅಣ್ಣಾತ್ತೆ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್​ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್​)

    ‘ಅಣ್ಣಾತ್ತೆ’ ಚಿತ್ರತಂಡದ ನಾಲ್ವರಿಗೆ ಪಾಸಿಟಿವ್​; ಚಿತ್ರೀಕರಣ ಸ್ಥಗಿತ

    ಪೊಲೀಸ್​ ಇನ್ಸ್​ಪೆಕ್ಟರ್​, ಕಾನ್ಸ್​ಟೇಬಲ್​ಗೆ ಹಾಡಹಗಲೇ ಬೆಂಕಿ ಹಚ್ಚಿದ ಗುಂಪು: ಇಬ್ಬರ ಸ್ಥಿತಿಯೂ ಗಂಭೀರ!

    ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts