ಟಾಲಿವುಡ್​ನಲ್ಲಿ ಘೀಳಿಡಲಿದೆ ಮದಗಜ!; ತೆಲುಗಿಗೆ ಹೊರಟು ನಿಂತ ಶ್ರೀಮುರಳಿ

collage (13)
Published on

ಬೆಂಗಳೂರು: ಶ್ರೀಮುರಳಿ ಅವರ ಹುಟ್ಟುಹಬ್ಬದ ಅಂಗವಾಗಿ, ಚಿತ್ರದ ಫಸ್ಟ್​ಲುಕ್​ ಟೀಸರ್​ ಈಗಾಗಲೇ ಬಿಡುಗಡೆಯಾಗಿ ಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಇದೀಗ ಇದೇ ಸಿನಿಮಾ ತೆಲುಗಿನಲ್ಲಿಯೂ ತೆರೆಕಾಣಲಿದೆ ಎಂಬ ವಿಚಾರವನ್ನು ಚಿತ್ರತಂಡ ಘೋಷಣೆ ಮಾಡಿದೆ. ಈ ಮೂಲಕ ಟಾಲಿವುಡ್​ಗೆ ಶ್ರೀಮುರಳಿ ಪದಾರ್ಪಣೆ ಮಾಡಲಿದ್ದಾರೆ.

ಹೌದು, ಮದಗಜ ಚಿತ್ರದ ತೆಲುಗು ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಹೊಸ ವರ್ಷಕ್ಕೆ ತೆಲುಗು ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಈ ಸಂಬಂಧ ಸ್ವತಃ ಶ್ರಿಮುರಳಿ ಟ್ವಿಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಜ.1ರ ಬೆಳಗ್ಗೆ 10.10ಕ್ಕೆ ಆನಂದ್ ಆಡಿಯೋದಲ್ಲಿ ಚಿತ್ರದ ತೆಲುಗು ಟೀಸರ್ ಬಿಡುಗಡೆ ಆಗಲಿದೆ ಎಂದಿದ್ದಾರೆ.

ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಮದಗಜ’ ಚಿತ್ರದ ಮೂರು ಹಂತಗಳ ಚಿತ್ರೀಕರಣ ಮುಗಿದಿದ್ದು, ಶೇ. 75ರಷ್ಟು ಮುಗಿದಿದೆ. ಈ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ನಟಿಸುತ್ತಿದ್ದು, ಚಿಕ್ಕಣ್ಣ, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net