ಕಂಠಿ, ಸಾಹೇಬ ಚಿತ್ರ ನಿರ್ದೇಶಿಸಿದ್ದ ಯುವ ನಿರ್ದೇಶಕ ಭರತ್ ಇನ್ನಿಲ್ಲ​

Bharath
Published on

ಬೆಂಗಳೂರು: ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಕಂಠಿ ಸಿನಿಮಾ ನಿರ್ದೇಶಕ ಭರತ್ ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗ ಯುವ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ.

ಬಹು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್​ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.24ರ ರಾತ್ರಿ 11ಗಂಟೆಗೆ ನಿಧನರಾಗಿದ್ದಾರೆ.

ಶ್ರೀಮುರುಳಿ ಅಭಿನಯದ ಕಂಠಿ ಸಿನಿಮಾ ಹಾಗೂ ರವಿಚಂದ್ರನ್​ ಪುತ್ರ ಮನೋರಂಜನ್ ನಟನೆಯ ಸಾಹೇಬ ಚಿತ್ರಕ್ಕೂ‌ ಭರತ್​ ನಿರ್ದೇಶನ ಮಾಡಿದ್ದರು. ಭರತ್​ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದ್ದು, ದುಃಖಿತ ಕುಟುಂಬಕ್ಕೆ ಸಾಂತ್ವಾನ ಹೇಳಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net