ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ ಬಾಲಕಿ ವಿಶ್ವಪ್ರಸಿದ್ಧ ಸೆಲೆಬ್ರಿಟಿ...ಯಾರೆಂದು ಗುರುತಿಸುವಿರಾ?

Sunny
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯ ಫೋಟೋವೊಂದು ಹರಿದಾಡುತ್ತಿದೆ. ಅದರ ಜತೆಯಲ್ಲೇ ಆ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಉತ್ತರಿಸಲು ಕೆಲವರು ಗೊಂದಲಕ್ಕೀಡಾಗಿದ್ದರೆ, ಇನ್ನು ಕೆಲವರು ಆ ಬಾಲಕಿ ಯಾರೆಂಬುದನ್ನು ಸಹ ಪತ್ತೆಹಚ್ಚಿದ್ದಾರೆ.

ಫೋಟೋದಲ್ಲಿ ಹಿಮಾವೃತ ಪ್ರದೇಶದಲ್ಲಿ ನಿಂತಿರುವ ಬಾಲಕಿ ಚಳಿಯಿಂದ ರಕ್ಷಿಸಿಕೊಳ್ಳಲು ತಲೆಯಿಂದ ಪಾದದವರೆಗೂ ಕವರ್​ ಆಗುವಂತಹ ಉಡುಗೆ ಧರಿಸಿದ್ದಾರೆ. ಮುಖವು ಸ್ಪಷ್ಟವಾಗಿ ಕಾಣುತ್ತಿದೆ. ಹಾಗಾದರೆ, ಆ ಬಾಲಕಿ ಯಾರಿರಬಹುದು ಅಂದುಕೊಂಡರೆ, ಅದು ಬೇರೆ ಯಾರು ಅಲ್ಲ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್​. ಈ ಫೋಟೋವನ್ನು 36 ವರ್ಷಗಳ ಹಿಂದೆ ಸೆರೆಹಿಡಿಯಲಾಗಿದೆ.

ಸನ್ನಿ ಲಿಯೋನ್​ ಕೆನಡಾದಲ್ಲಿ ಹುಟ್ಟಿದಾದರೂ ಅವರ ಮೂಲ ಭಾರತವೇ ಆಗಿದೆ. ಅನಿವಾರ್ಯ ಕಾರಣಗಳಿಂದ ಪೋರ್ನ್​ ಉದ್ಯಮಕ್ಕೆ ಕಾಲಿಟ್ಟಿದ್ದ ಸನ್ನಿ ಲಿಯೋನ್​ ಇದೀಗ ಅಶ್ಲೀಲ ಜಗತ್ತಿಗೆ ಗುಡ್​ ಬೈ ಹೇಳಿ ಕಳೆದ ಕೆಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಸನ್ನಿ, ಸದ್ಯ ತಮ್ಮ ಕುಟುಂಬದೊಂದಿಗೆ ಭಾರತದಲ್ಲೇ ನೆಲೆಸಿದ್ದಾರೆ.

ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವುದಲ್ಲದೇ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ಸನ್ನಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸನ್ನಿ ಅವರು ಕೆನಡಾದಲ್ಲಿ ನೆಲೆಸಿದ್ದ ಭಾರತ ಮೂಲದ ಪಂಜಾಬಿ ಸಿಖ್ ದಂಪತಿಯ ಮಗಳು. ಸನ್ನಿಗೆ ಕೆನಡಾ ಪೌರತ್ವವು ಇದೆ. ಕರೆನ್​ ಎಂಬುದು ಸನ್ನಿಯ ಅಡ್ಡ ಹೆಸರು.​

ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಸನ್ನಿ, ನಿರ್ಮಾಣ ಕಂಪನಿಯನ್ನು ಹೊಂದಿದ್ದು, ವಿತರಣೆಯನ್ನು ಕೂಡ ಮಾಡುತ್ತಾರೆ. ಇದೀಗ ಅವರ ಬಾಲ್ಯದ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸನ್ನಿಯನ್ನು ಬಾಲ್ಯದ ಗೆಟಪ್​ನಲ್ಲಿ ನೋಡಿದವರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net