More

    ರಾಜಧಾನಿಯಲ್ಲಿ ಪುರುಷರೇ ದುರ್ಬಲ?; ಈ ವಿಷಯದಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುರುಷರೇ ದುರ್ಬಲ ಮನಸ್ಥಿತಿಯವರಾ ಎಂದೆನಿಸಿದರೂ ಅಚ್ಚರಿ ಏನಿಲ್ಲ. ಏಕೆಂದರೆ ನಗರಕ್ಕೆ ಸಂಬಂಧಿಸಿದಂಥ ಅಂಕಿ-ಅಂಶವೊಂದು ಅಂಥ ಅಂಶವೊಂದನ್ನು ಹೊರಗೆಡಹಿದೆ. ಆ ಪ್ರಕಾರ ಪುರುಷರೇ ಮಾನಸಿಕವಾಗಿ ದುರ್ಬಲ ಅನಿಸಿದರೂ ತಪ್ಪೇನಲ್ಲ. ಮಾತ್ರವಲ್ಲ ಈ ವಿಷಯದಲ್ಲಿ ಹೆಣ್ಮಕ್ಳೇ ಸ್ಟ್ರಾಂಗ್ ಅನ್ನೋದು ಇಲ್ಲಿ ಸಾಬೀತಾಗಿದೆ.

    ಹೌದು.. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು 2021ರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾತನಾಡುತ್ತ ಅಂಕಿ-ಅಂಶಗಳನ್ನೂ ನೀಡಿದ್ದಾರೆ.

    ಆ ಪ್ರಕಾರ ಕಳೆದ 2 ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ನಾಪತ್ತೆ ಪ್ರಕರಣಗಳು ಕೊಂಚ ಕಡಿಮೆಯಾಗಿವೆ. 2021ನೇ ಸಾಲಿನಲ್ಲಿ ನಗರದಲ್ಲಿ 2,363 ಮಹಿಳೆಯರ ನಾಪತ್ತೆ ಪ್ರಕರಣ ದಾಖಲಾಗಿದ್ದು, 2,072 ಪ್ರಕರಣ ಪತ್ತೆ ಹಚ್ಚಲಾಗಿದೆ. ನಾಪತ್ತೆ ಆಗಿರುವ ಉಳಿದ 291 ಮಹಿಳೆಯರು ಪತ್ತೆಯಾಗಿಲ್ಲ.

    ಇದೇ ಅವಧಿಯಲ್ಲಿ 1,490 ಪುರುಷರ ನಾಪತ್ತೆ ಪ್ರಕರಣ ದಾಖಲಾಗಿದ್ದು, 1,127 ಪ್ರಕರಣ ಪತ್ತೆಯಾಗಿದ್ದು, 363 ಪ್ರಕರಣ ಪತ್ತೆಯಾಗಬೇಕಿದೆ. ಗಮನಾರ್ಹ ವಿಚಾರವೆಂದರೆ, 2021ನೇ ಸಾಲಿನಲ್ಲಿ ಒಂದೇ ಒಂದು ಬಾಲಕ-ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿಲ್ಲ.

    ಇನ್ನು ಆತ್ಮಹತ್ಯೆ ಪ್ರಕರಣಗಳ ವಿವರ ಗಮನಿಸಿದರೆ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎನ್ನಬಹುದು. 2021ನೇ ಸಾಲಿನಲ್ಲಿ 1,974 ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 1,405 ಮಂದಿ ಪುರುಷರು ಹಾಗೂ 569 ಮಂದಿ ಮಹಿಳೆಯರು. 171 ಮಂದಿ ವಿಷ ಸೇವಿಸಿ ಮೃತಪಟ್ಟಿದ್ದು, ಈ ಪೈಕಿ 119 ಪುರುಷರು ಹಾಗೂ 52 ಮಹಿಳೆಯರು ಇದ್ದಾರೆ. ಅಂದರೆ ಕಳೆದ ವರ್ಷ ದಾಖಲಾಗಿರುವ ಒಟ್ಟು 2145 ಆತ್ಮಹತ್ಯೆ ಪ್ರಕರಣಗಳಲ್ಲಿ ಸಾವಿಗೆ ಶರಣಾದ ಪುರುಷರ ಸಂಖ್ಯೆ 1524 ಮತ್ತು ಮಹಿಳೆಯರ ಸಂಖ್ಯೆ 621.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts