

ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ಅವರು ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಹುನಿರೀಕ್ಷಿತ ರಾಧೆ ಶ್ಯಾಮ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ರೆ, ಆದಿಪುರುಷ ಮತ್ತು ಸಲಾರ್ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಇದರ ನಡುವೆ ಸಂದೀಪ್ ರೆಡ್ಡಿ ನಿರ್ದೇಶನದ "ಸ್ಪಿರಿಟ್" ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಇದು ಪ್ರಭಾಸ್ ಅವರ 25ನೇ ಚಿತ್ರವಾಗಲಿದ್ದು, ಅಧಿಕೃತವಾಗಿ ಘೋಷಣೆ ಆಗಿದೆ.
ಇದೀಗ ಸ್ಪಿರಿಟ್ ಸಿನಿಮಾ ಕುರಿತು ಕ್ರೇಜಿ ನ್ಯೂಸ್ ಒಂದು ಹೊರಬಿದ್ದಿದೆ. ಸ್ಪಿರಿಟ್ ಚಿತ್ರದಲ್ಲಿ ದಕ್ಷಿಣ ಕೊರಿಯಾದ ಪ್ರಖ್ಯಾತ ನಟಿ ಕಿಮ್ ಸೂ ಹ್ಯುನ್ ಬಣ್ಣ ಹಚ್ಚಲಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ತುಂಬಾ ಹೆಸರು ಮಾಡಿರುವ ಕಿಮ್, ಸ್ಪಿರಿಟ್ ಚಿತ್ರದಲ್ಲಿ ಖಳನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇನ್ನು ಸ್ಪಿರಿಟ್ ಚಿತ್ರವನ್ನು ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಪ್ಯಾನ್ ವರ್ಲ್ಡ್ ಮಟ್ಟಿಗೆ ಮೇಕಿಂಗ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎಂಬ ಮಾತುಗಳು ಟಾಲಿವುಡ್ ಗಲ್ಲಿಯಿಂದ ಕೇಳಿಬರುತ್ತಿದೆ. (ಏಜೆನ್ಸೀಸ್)