ಕೋಟಿ ಸಂಪಾದಿಸುವ ಸಮಂತಾರ ಮೊದಲ ಸಂಬಳ ಎಷ್ಟೆಂಬುದನ್ನು ತಿಳಿದ್ರೆ ನೀವು ಅಚ್ಚರಿ ಪಡ್ತೀರಾ!

Samantha
Published on

ಚೆನ್ನೈ: ಓರ್ವ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಆತ ತನ್ನ ಜೀವನದ ಅನೇಕ ಸಂಗತಿಗಳನ್ನು ಎಂದಿಗೂ ಮರೆಯುವುದಿಲ್ಲ. ಅವುಗಳಲ್ಲಿ ಮೊದಲ ಲವ್​, ಮೊದಲ ಪ್ರವಾಸ, ಮೊದಲ ಸಿನಿಮಾ ಮತ್ತು ಮೊದಲ ಸಂಬಳ ಹೀಗೆ ಸಾಕಷ್ಟು ಕ್ಷಣಗಳನ್ನು ಎಂದಿಗೂ ನೆನಪಿನಲ್ಲಿರುತ್ತವೆ. ಹೀಗ್ಯಾಕೆ ಈ ವಿಚಾರ ಅಂತಿರಾ...ಏಕೆಂದರೆ ಸೌತ್​ ಬ್ಯೂಟಿ ಸಮಂತಾ ತಮ್ಮ ಮೊದಲ ಸಂಬಳದ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಈ ಮೇಲಿನ ಪೀಠಿಕೆ ಹಾಕಲಾಗಿದೆ.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್​ ಹೀರೋಯಿನ್​ ಪಟ್ಟ ಗಿಟ್ಟಿಸಿರುವ ಸಮಂತಾ ತಮ್ಮ ಮೊದಲ ಸಂಬಳ ಎಷ್ಟು ಎಂಬುದನ್ನು ಹಂಚಿಕೊಂಡಿದ್ದಾರೆ. ಸಮ್ಮೇಳನ ಒಂದರಲ್ಲಿ ಒಂದು ದಿನ ನಿರೂಪಣೆ ಕೆಲಸ ಮಾಡಿದ್ದಕ್ಕಾಗಿ 500 ರೂ. ಸಂಬಳ ಸ್ವೀಕರಿಸಿದಂತೆ.

ಇತ್ತೀಚೆಗೆ ಸಮಂತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜತೆ ಪ್ರಶ್ನೋತ್ತರ ಸೆಷನ್ಸ್​ ನಡೆಸಿದ್ದರು. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸಮಂತಾ ಉತ್ತರ ನೀಡಿದ್ದಾರೆ. ಈ ವೇಳೆ ತನ್ನ ಮೊದಲ ಸಂಬಳ 500 ರೂಪಾಯಿ ಎಂದು ಬಹಿರಂಗಪಡಿಸಿದರು. ಈ ವೇಳೆ 8 ಗಂಟೆ ಕೆಲಸ ಮಾಡಿದ್ದರಂತೆ. ಮೊದಲ ಸಂಬಳ ಪಡೆಯುವಾಗ ಸಮಂತಾ ಇನ್ನೂ ಶಾಲಾ ವಿದ್ಯಾರ್ಥಿನಿಯಾಗಿದ್ದರಂತೆ.

ಮುಂಬರುವ ಕಾಥು ವಾಕುಲ ರೆಂಡು ಕಾದಲ್​ ಚಿತ್ರದಲ್ಲಿ ಕಣ್ಮಣಿ ಪಾತ್ರದ ಬದಲು ಖತೀಜ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಸಮಂತಾ, ಕಣ್ಮಣಿ ಇಲ್ಲದೆ ಖತೀಜ ಇಲ್ಲ ಖತೀಜ ಇಲ್ಲದೆ ಕಣ್ಮಣಿ ಇಲ್ಲ ಎಂದು ಸೊಗಸಾದ ಉತ್ತರ ನೀಡಿದರು.

ಕಾಥು ವಾಕುಲ ರೆಂಡು ಕಾದಲ್ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ರೊಮ್ಯಾಂಟಿಕ್ ಕಾಮಿಡಿಗಳು ನನ್ನ ನೆಚ್ಚಿನ ಸಿನಿಮಾ ಪ್ರಕಾರವಾಗಿದೆ. ತುಂಬಾ ಸಮಯದ ನಂತರ ನಾನು ಈ ರೀತಿಯ ಪಾತ್ರವನ್ನು ಮಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಕಾಥು ವಾಕುಲ ರೆಂಡು ಕಾದಲ್ ವೀಕ್ಷಿಸಲು ತುಂಬಾ ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದರು. ಹಾಗೇ ನೀವು ನೋಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net