More

    ರಾಧೆ ಶ್ಯಾಮ್ ಚಿತ್ರ ಫೇಲ್​ ಆಗಿದ್ದೇಕೆ? ಪ್ರಭಾಸ್ ಒಪ್ಪಿಕೊಂಡ ಕಹಿ ಸತ್ಯ ಇಲ್ಲಿದೆ… ​

    ಹೈದರಾಬಾದ್​: ನಟ ಪ್ರಭಾಸ್​ ಅಭಿನಯದ ಹಾಗೂ ಕಳೆದ ಮಾರ್ಚ್​ 11ರಂದು ಬಿಡುಗಡೆಯಾದ “ರಾಧೆ ಶ್ಯಾಮ್​” ಚಿತ್ರವೂ ಹೇಳಿಕೊಳ್ಳುವಷ್ಟು ಯಶಸ್ಸು ಸಾಧಿಸಲಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾದರೂ ತೆಲುಗು ಬಿಟ್ಟರೆ ಉಳಿದ ಯಾವ ಭಾಷೆಯಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಲಿಲ್ಲ. ಸಾಕಷ್ಟು ಹಣ ವ್ಯಯಿಸಿ ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಿದಾದರೂ ರಾಧೆ ಶ್ಯಾಮ್​ ಪ್ರಭಾಸ್​ ಸಿನಿಮಾಗಳ ಫೇಲ್ಯೂರ್​ ಪಟ್ಟಿಗೆ ಸೇರಿದೆ.

    ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಪ್ರಭಾಸ್, ದೂರದೃಷ್ಟಿ ಇಲ್ಲದೆ ರಾಧೆಶ್ಯಾಮ್​ ಸಿನಿಮಾವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ರಾಧೆ ಶ್ಯಾಮ್​ ಸಿನಿಮಾವು ಬೇರೆ ಜೋನರ್ ಆಗಿದ್ದು,​ ವಿಕ್ರಮಾದಿತ್ಯದಂತಹ ಮೃದುವಾದ ಪಾತ್ರವು ನನ್ನ ಇಮೇಜ್‌ಗೆ ಸರಿಹೊಂದಲಿಲ್ಲ ಎಂದು ಪ್ರಭಾಸ್​ ಒಪ್ಪಿಕೊಂಡರು.

    ಬಹುಶಃ ಕೋವಿಡ್-19ನಿಂದಾದ ಹಿನ್ನೆಡೆ ಅಥವಾ ನಾವು ಸ್ಕ್ರಿಪ್ಟ್‌ನಲ್ಲಿ ಏನನ್ನಾದರೂ ಮಿಸ್​ ಮಾಡಿರಬಹುದು ಎನ್ನುವ ಮೂಲಕ ರಾಧೆ ಶ್ಯಾಮ್​ ವೈಫಲ್ಯವನ್ನು ಪ್ರಭಾಸ್​ ಒಪ್ಪಿಕೊಂಡರು. ಜನರು ನನ್ನನ್ನು ಆ ಜೋನಾರ್​ನಲ್ಲಿ ನೋಡಲು ಬಯಸುವುದಿಲ್ಲ, ಅವರು ನನ್ನಿಂದ ಬೇರೆ ಏನಾದರೂ ನಿರೀಕ್ಷಿಸಬಹುದು ಎಂದರು.

    ಇದೀಗ ಮತ್ತೆ ರಗಡ್​ ಲುಕ್​ನಲ್ಲಿ ಪ್ರಭಾಸ್​ ಮತ್ತೊಮ್ಮೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್​ ಖ್ಯಾತಿ ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿದೆ. (ಏಜೆನ್ಸೀಸ್​)

    ಮದ್ವೆ ತಡೆಯಲು ಸರ್ಪ್ರೈಸ್​ ಗಿಫ್ಟ್​ ಕೊಡೋದಾಗಿ ಭಾವಿ ಪತಿಯನ್ನು ಊರಿಗೆ ಕರೆಸಿ ಶಾಕ್​ ಕೊಟ್ಟ ಯುವತಿ!

    ವಧುವಿನಂತೆ ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು ಮದುವೆಯಾದ ವರ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    BBMP ಕಸದ ಲಾರಿಗೆ ಮಹಿಳೆ ಬಲಿ: ಹುಟ್ಟುವ ಮೊದ್ಲೇ ಅಪ್ಪನ ಕಳೆದುಕೊಂಡ ಮಗುವಿಗೆ ಈಗ ಅಮ್ಮನೂ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts