ಕಾಲಿವುಡ್​ನ ಖ್ಯಾತ ಗೀತರಚನೆಕಾರನ ಮಗಳು, ವಸ್ತ್ರ ವಿನ್ಯಾಸಗಾರ್ತಿ ಥೂರಿಗೈ ಕಬಿಲನ್ ದುರಂತ ಸಾವು​

Thooragai
Published on

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಗೀತರಚನೆಕಾರ ಕಬಿಲನ್​ ಅವರ ಮಗಳು ಚೆನ್ನೈನ ಅರುಂಬಕ್ಕಮ್​ನಲ್ಲಿರುವ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತಳನ್ನು ಥೂರಿಗೈ ಕಬಿಲನ್​ ಎಂದು ಗುರುತಿಸಲಾಗಿದೆ. ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡುತ್ತಿದ್ದ ಥೂರಿಗೈ, ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಸಾವಿಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ . ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಥೂರಿಗೈ ಅವರು ಬಿಯಿಂಗ್​ ವುಮೆನ್​ ಹೆಸರಿನ ಮ್ಯಾಗ್​ಜಿನ್​ನಲ್ಲಿ ಸಾಂಸ್ಥಿಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಮೊದಲ ಆವೃತ್ತಿಯ ಮ್ಯಾಗಜಿನ್​ ಅನ್ನು ನಿರ್ದೇಶಕರಾದ ಪಾ. ರಂಜಿತ್​, ಚೇರನ್​ ಮತ್ತು ನಟಿ ವಿಮಲಾ ರಾಮನ್​ ಅವರು 2020ನೇ ಇಸವಿಯಲ್ಲಿ ಬಿಡುಗಡೆ ಮಾಡಿದ್ದರು.

ಪುದುಚೇರಿ ಮೂಲದ ಜನಪ್ರಿಯ ತಮಿಳು ಚಲನಚಿತ್ರ ಗೀತರಚನೆಕಾರರಾದ ಕಬಿಲನ್​, ತಮ್ಮ ಕುಟುಂಬದೊಂದಿಗೆ ಚೆನ್ನೈನ ಅರುಂಬಕ್ಕಂನ ಎಂಎಂಡಿಎ ಕಾಲನಿಯಲ್ಲಿ ನೆಲೆಸಿದ್ದು, ಅವರ ಮಗಳು ಥೂರಿಗೈ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಎಲ್ಲರನ್ನೂ ದೊಡ್ಡ ಆಘಾತಕ್ಕೆ ದೂಡಿದೆ.

ಥೂರಿಗೈ ಅವರ ದೇಹವನ್ನು ಪ್ರಸ್ತುತ ಚೆನ್ನೈನ ಸಾಲಿಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನ್ಯೂಸ್ ಪೋರ್ಟಲ್ ಒಂದರ ಪ್ರಕಾರ, ಥೂರಿಗೈ ತನ್ನ ಮನೆಯಲ್ಲಿಯೇ ಉಳಿದುಕೊಂಡಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಹೊರಗೆ ಹೋಗುವುದನ್ನು ಬಿಟ್ಟು ಖಿನ್ನತೆಗೆ ಒಳಗಾಗಿದ್ದರು. ಇದೀಗ ಸಾವಿನ ಹಾದಿ ಹಿಡಿದಿದ್ದು, ಅನೇಕ ಸಿನಿ ಗಣ್ಯರು ಖ್ಯಾತ ಸಾಹಿತಿಗಳಿಗೆ ಸಾಂತ್ವನ ಹೇಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net