ಫೋಟೋ ವೈರಲ್ ಆದ​ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹೇಳಿಕೆಗೆ ಶಾಕಿಂಗ್​ ಪ್ರತಿಕ್ರಿಯೆ ನೀಡಿದ ರಾಮ್​ ಚರಣ್​..!

Prashanth
Published on

ಹೈದರಾಬಾದ್​: ದಸರಾ ಹಬ್ಬದ ದಿನದಂದೇ ಮೆಗಾ ಪವರ್​ಸ್ಟಾರ್​ ರಾಮ್​ ಚರಣ್​​ ನಿರ್ದೇಶಕ ಗೌತಮ್​ ತಿನ್ನನೌರಿ ಜತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕೆಜಿಎಫ್​ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ನೀಲ್​ ಕೂಡ ರಾಮ್​ ಚರಣ್​ ಜತೆ ಸಿನಿಮಾ ಮಾಡುವುದಾಗಿ ಸುಳಿವು ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಚಿರಂಜೀವಿ ಮತ್ತು ರಾಮ್​ಚರಣ್​ ಭೇಟಿಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಜತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ವಿಷಯವೂ ಚರ್ಚೆಯಾಗಿತ್ತು. ಆದರೆ, ಪ್ರಶಾಂತ್​ ನೀಲ್​ ಜತೆ ಸಿನಿಮಾ ಮಾಡುತ್ತಿಲ್ಲ ಎಂದು ರಾಮ್​ ಚರಣ್​ ಸ್ಪಷ್ಟನೆ ನೀಡಿದ್ದಾರೆ.

ಪ್ರಶಾಂತ್​ ನೀಲ್​ ಟ್ವೀಟ್​ ಮಾಡುವ ಮುನ್ನವೇ ಮಾಧ್ಯಮಗಳು ತುಂಬಾ ಹೈಪ್​ ಸೃಷ್ಟಿ ಮಾಡಿದ್ದವು. ರಾಮ್​ ಚರಣ್​ ಮತ್ತು ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂಬ ಸುದ್ದಿಯಾಗಿತ್ತು. ಅದರಲ್ಲೂ ನೀಲ್​ ರಾಮ್​ ಚರಣ್​ ಮತ್ತು ಮೆಗಾಸ್ಟಾರ್​ ಚಿರಂಜೀವಿ ಜತೆಗಿನ ಫೋಟೋ ಶೇರ್​ ಮಾಡಿಕೊಂಡ ಟ್ವೀಟ್​ ಮಾಡಿದ ಬಳಿಕವಂತೂ ಇನ್ನಷ್ಟು ಹೈಪ್​ ಕ್ರಿಯೆಟ್​ ಆಗಿತ್ತು. ಪ್ರಶಾಂತ್​ ಕೂಡ ಮತ್ತೊಂದು ಚಿತ್ರದ ತಯಾರಿ ಕುರಿತು ಟ್ವೀಟ್​ನಲ್ಲಿ ಸುಳಿವು ನೀಡಿದ್ದರು. ಆದರೆ, ಇದೀಗ ರಾಮ್​ ಚರಣ್​, ಪ್ರಶಾಂತ್​ ನೀಲ್​ಗೆ ಶಾಕ್​ ನೀಡಿದ್ದಾರೆ.

ರಾಮ್​ ಚರಣ್​ ಅವರು ನಿನ್ನೆ ನಾಟ್ಯಂ ಹೆಸರಿನ ಮುಂಬರುವ ತೆಲುಗು ಚಿತ್ರವೊಂದರ ಪ್ರೀ ರಿಲೀಸ್​ ಈವೆಂಟ್​ನಲ್ಲಿ ಭಾಗವಹಿಸಿದ್ದರು. ಈ ವೇಳೆ ವರದಿಗಾರರು ಪ್ರಶಾಂತ್​ ನೀಲ್​ ಜತೆಗಿನ ಮುಂದಿನ ಚಿತ್ರದ ಬಗ್ಗೆ ಪ್ರಶ್ನಿಸಿದ್ದರು. ಆದರೆ, ಅದನ್ನು ಚಿರು ಪುತ್ರ ನಿರಾಕರಿಸಿದ್ದಾರೆ.

ನೀವು ಪ್ರಶಾಂತ್​ ನೀಲ್​ ಜತೆ ಸಿನಿಮಾ ಮಾಡುತ್ತಿದ್ದೀರಾ? ಎಂದು ವರದಿಗಾರನ ಪ್ರಶ್ನೆಗೆ ಉತ್ತರಿಸಿದ ರಾಮ್​ ಚರಣ್​, ಇಲ್ಲ. ಅದೊಂದು ಔತಣ ಕೂಟವಾಗಿತ್ತಷ್ಟೇ ಎಂದಿದ್ದಾರೆ. ಭವಿಷ್ಯದಲ್ಲಿ ಏನಾದರೂ ಸಂಭವಿಸಿದರೆ, ಅದನ್ನು ಘೋಷಣೆ ಮಾಡುತ್ತೇವೆ ಎಂದು ಹೇಳಿದರು. ಆದರೆ, ಪ್ರಶಾಂತ್​ ಟ್ವೀಟ್​ನಲ್ಲಿ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದರು. ಆದರೆ, ಇದೀಗ ರಾಮ್​ ಚರಣ್​ ನೀಡಿರುವ ಹೇಳಿಕೆ ಸ್ವತಃ ಪ್ರಶಾಂತ್​ ನೀಲ್​ಗೆ ಶಾಕ್​ ಆಗಿದ್ದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net