

ನವದೆಹಲಿ: ನೀವು ಮನೆಯಲ್ಲೇ ಕುಳಿತು 5 ಲಕ್ಷ ರೂಪಾಯಿ ಸಂಪಾದಿಸಬೇಕೆ? ಹಾಗದರೆ, ನಿಮಗಿದು ಸುವರ್ಣಾವಕಾಶವೇ ಸರಿ. ನಿಮ್ಮ ಬಳಿ ಕೇವಲ 2 ರೂಪಾಯಿ ನಾಣ್ಯವಿದ್ದರೆ ಇದು ಸಾಧ್ಯವಾಗಲಿದೆ. ಆದರೆ, ಕೆಲವೊಂದಿಷ್ಟು ಷರತ್ತುಗಳು ಅನ್ವಯ ಆಗಲಿವೆ.
ಇತ್ತೀಚೆಗಷ್ಟೇ 1 ರೂಪಾಯಿ ನಾಣ್ಯ ಆನ್ಲೈನ್ನಲ್ಲಿ 1 ಕೋಟಿ ರೂಪಾಯಿಗೆ ಹರಾಜು ಆಯಿತು. ಅನೇಕರು ಇದನ್ನು ನಂಬಲು ತಯಾರಿಲ್ಲ. ಆದರೆ, ಇದು ನಿಜವಾಗಿಯೂ ನಡೆದಿದೆ. ಹರಾಜಾದ ಒಂದು ರೂ. ನಾಣ್ಯ ಅಷ್ಟೊಂದು ಬೆಲೆ ಪಡೆಯಲು ಕಾರಣ ಅದರ ಪ್ರಾಮುಖ್ಯತೆ. ಆ ನಾಣ್ಯವನ್ನು 1885ರಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ರಾಜ್ ಜಾರಿಗೆ ತಂದಿತ್ತು.
ಇದೀಗ 2 ರೂಪಾಯಿ ನಾಣ್ಯ ಭಾರೀ ಮೊತ್ತ ಸಂಪಾದಿಸುವ ಅವಕಾಶ ತಂದುಕೊಟ್ಟಿದೆ. ಭಾರತದ ಬಾವುಟವಿರುವ ಮತ್ತು 1994ರಲ್ಲಿ ತಯಾರಾದ 2 ರೂಪಾಯಿ ನಾಣ್ಯಕ್ಕೆ ಇದೀಗ ಬೇಡಿಕೆ ಬಂದಿದೆ. ಈ ಅಪರೂಪದ ನಾಣ್ಯ ಕ್ವಿಕರ್ ವೆಬ್ಸೈಟ್ನಲ್ಲಿ 5 ಲಕ್ಷ ರೂ.ವರೆಗೂ ಬೆಲೆ ಇದೆ. ನಿಮ್ಮ ಬಳಿ ನಾಣ್ಯವಿದ್ದರೆ, ಅದನ್ನು ಫೋಟೋ ತೆಗೆದು ಕ್ವಿಕ್ಕರ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ.
ಹಳೆಯ ನಾಣ್ಯ ಸಂಗ್ರಹಿಸುವ ಹವ್ಯಾಸ ಇರುವವರು ನಿಮ್ಮ ನಾಣ್ಯ ನೋಡಿ ಇಷ್ಟವಾದರೆ, ನೀವು ನೀಡುವ ವಿಳಾಸ ಮೂಲಕ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಆದರೆ, ಆನ್ಲೈನ್ನಲ್ಲಿ ವಂಚಕರ ಜಾಲವಿದ್ದು, ಇಂತಹ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆ ವಹಿಸಬೇಕು, ಇಲ್ಲವಾದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. (ಏಜೆನ್ಸೀಸ್)