

ಹೈದರಾಬಾದ್: ಮದುವೆಗೂ ಮುನ್ನ ತುಂಬಾ ಬಿಜಿಯಾಗಿದ್ದ ನಟಿ ಸಮಂತಾ ಮದುವೆ ನಂತರ ಬೆರಳಷ್ಟು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿದರು. ಆದರೂ, ಕಿರತೆರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸದ್ದು ಮಾಡಿದರು. ಇದೀಗ ವೈವಾಹಿಕ ಜೀವನದಲ್ಲಿ ಉಂಟಾಗಿರುವ ಮನಸ್ತಾಪಗಳಿಂದ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಆಗಿದ್ದು, ಮತ್ತೆ ಪೂರ್ಣ ಪ್ರಮಾಣದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶ ಪಡೆದಿರುವ ಸಮಂತಾ ಸಿನಿಮಾ ಮಾಡಲು ಒಂದಿಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದಕ್ಕೆ ಕಾರಣ ಡಿವೋರ್ಸ್ ಪರಿಣಾಮವಾಗಿದೆ.
ದಸರಾ ಸಂದರ್ಭದಲ್ಲೇ ಸಮಂತಾ ಎರಡು ಹೊಸ ಚಿತ್ರಗಳನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಸಮಂತಾ ಕೈಯಲ್ಲಿ ಇದೀಗ ನಾಲ್ಕು ಚಿತ್ರಗಳಿದ್ದು, ಮತ್ತೆ ಸಿನಿಮಾ ರಂಗದಲ್ಲಿ ತುಂಬಾ ಬಿಜಿಯಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಮಾಡುವಾಗ ಸ್ಟಾರ್ ಹಿರೋ ಮತ್ತು ಹಿರೋಯಿನ್ಗಳು ಕೆಲವೊಂದಿಷ್ಟು ಷರತ್ತುಗಳನ್ನು ಹಾಕುತ್ತಾರೆ. ಇದೀಗ ತಿಳಿದುಬಂದಿರುವ ವಿಚಾರವೆಂದರೆ ಸಮಂತಾ ಕೂಡ ಒಂದಿಷ್ಟು ಹೊಸ ಷರತ್ತುಗಳನ್ನು ಹಾಕಿದ್ದಾರೆಂದು ಕೇಳಿಬಂದಿದೆ.
ಹಾಗಾದರೆ ಆ ಷರತ್ತುಗಳು ಏನೆಂದು ನೋಡುವುದಾದರೆ, ತಾನು ನಟಿಸುವ ಚಿತ್ರದ ಶೂಟಿಂಗ್ ಬಹುತೇಕ ಚೆನ್ನೈನಲ್ಲಿ ನಡೆಯಬೇಕೆಂದು ಹೇಳಿದ್ದಾರೆ. ಅದರಲ್ಲೂ ಸ್ಥಳೀಯ ಹೈದರಾಬಾದ್ನಲ್ಲಿ ಶೂಟಿಂಗ್ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ, ಒಳಂಗಾಣ ಶೂಟಿಂಗ್ ಅಥವಾ ಸೆಟ್ ಒಳಗೆ ಮಾತ್ರ ಹೈದರಾಬಾದ್ನಲ್ಲಿ ನಡೆಯಬೇಕೆಂದು ನಿರ್ಮಾಪಕ ಮತ್ತು ನಿರ್ದೇಶಕರಿಗೆ ಷರತ್ತು ವಿಧಿಸಿದ್ದಾರೆಂದು ತಿಳಿದುಬಂದಿದೆ.
ಸಮಂತಾರ ಈ ಷರತ್ತಿಗೆ ಕಾರಣವೇನೆಂದರೆ, ಡಿವೋರ್ಸ್ ಘೋಷಣೆ ಬೆನ್ನಲ್ಲೇ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಟ್ರೋಲ್ಗಳಿಗೆ ಸಮಂತಾ ಉತ್ತರವನ್ನು ಸಹ ನೀಡಿದ್ದಾರೆ. ಒಂದು ವೇಳೆ ಹೊರಾಂಗಣದಲ್ಲಿ ನಡೆಯುವ ಶೂಟಿಂಗ್ ವೇಳೆ ಅಲ್ಲಿಗೆ ಬರುವವರು ಕಾಮೆಂಟ್ ಮಾಡುವ ಸಾಧ್ಯತೆ ಇದೆ ಎಂದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)