More

    ತ್ರಿಷಾ ಈಗ ಬೃಂದಾ

    ಆರು ವರ್ಷಗಳೇ ಆಗಿತ್ತು ತ್ರಿಷಾ, ಟಾಲಿವುಡ್​ನಲ್ಲಿ ಕಾಣಿಸಿಕೊಂಡು. 2015ರಲ್ಲಿ ಬಿಡುಗಡೆಯಾದ ಸತ್ಯದೇವ್ ಅಭಿನಯದ ‘ಲಯನ್’ ಚಿತ್ರದಲ್ಲಿ ನಟಿಸಿದ್ದ ತ್ರಿಷಾ, ಆ ನಂತರ ಟಾಲಿವುಡ್​ನಿಂದ ದೂರವೇ ಇದ್ದರು. ಈ ಮಧ್ಯೆ, ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ, ಬಾಲಕೃಷ್ಣ ಅಭಿನಯದ ಹೊಸ ಚಿತ್ರವೊಂದಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು. ಆದರೆ, ಅದ್ಯಾವುದೂ ನಿಜವಾಗಲಿಲ್ಲ. ಹೀಗಿರುವಾಗಲೇ, ಅವರ ‘ಬೃಂದಾ’ ಎಂಬ ತೆಲುಗು ವೆಬ್​ಸೀರೀಸ್​ನಲ್ಲಿ ನಟಿಸುವ ಮೂಲಕ ಟಾಲಿವುಡ್​ಗೆ

    ವಾಪಸ್ಸಾಗಿದ್ದಾರೆ. ‘ಬೃಂದಾ’ ಸರಣಿಯ ಮುಹೂರ್ತ ಶುಕ್ರವಾರ, ವಿಜಯದಶಮಿ ಹಬ್ಬದ ಅಂಗವಾಗಿ ಹೈದರಾಬಾದ್​ನಲ್ಲಿ ನಡೆದಿದೆ. ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಈ ವೆಬ್​ಸರಣಿಯನ್ನು ಸೂರ್ಯ ವಂಗಲ ಎನ್ನುವವರು ನಿರ್ದೇಶಿಸುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ವೆಬ್​ಸೀರೀಸ್​ನಲ್ಲಿ ಕಾಣಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದ್ದು, ಈಗಾಗಲೇ ಟಾಲಿವುಡ್​ನ ಹಲವು ನಟಿಯರು ಒಂದಲ್ಲ ಒಂದು ವೆಬ್​ಸರಣಿಯಲ್ಲಿ ನಟಿಸಿದ್ದಾರೆ. ಕಾಜಲ್ ಅಗರ್​ವಾಲ್, ತಮನ್ನಾ ಭಾಟಿಯಾ, ಸಮಂತಾ, ಪ್ರಿಯಾಮಣಿ ನಂತರ ತ್ರಿಷಾ ಸಹ ಹೆಜ್ಜೆ ಇಟ್ಟಿದ್ದು, ಈ ಪ್ರಯತ್ನದಲ್ಲಿ ಅವರು ಗೆಲ್ಲುತ್ತಾರೋ, ಸೋಲುತ್ತಾರೋ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.-ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts