ನಟಿ ಸೌಜನ್ಯ ಸಾವು ಪ್ರಕರಣ: ಆರೋಪಿ ಮೊಬೈಲ್​ನಲ್ಲಿದ್ದ ಫೋಟೋ-ವಿಡಿಯೋಗಳ ಬೆನ್ನತ್ತಿದ ಪೊಲೀಸರು

Savi Madappa 1
Published on

ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಅಲಿಯಾಸ್​ ಸವಿ ಮಾದಪ್ಪ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೋಡು ಪೊಲೀಸರಿಂದ ತನಿಖೆ ಚುರುಕಾಗಿದ್ದು, ಎ 2 ಆರೋಪಿಯಾಗಿರುವ ನಟಿಯ ಆಪ್ತ ಸಹಾಯಕ ಮಹೇಶ್ ಮತ್ತು ಇನ್ನೋರ್ವನ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಸೌಜನ್ಯ ತಂದೆ ಪ್ರಭು ನೀಡಿದ್ದ ದೂರಿನನ್ವಯ ಈಗಾಗಲೇ ಪೊಲೀಸರು ಎಫ್​ ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕಿರುತೆರೆ ನಟ ವಿವೇಕ್​​ ಎ1 ಆರೋಪಿಯಾಗಿದ್ದರೆ, ಪಿಎ ಮಹೇಶ್​ ಎ2 ಆರೋಪಿಯಾಗಿದ್ದಾನೆ.

ಸದ್ಯ ಮಹೇಶ್​ ಕಾಲ್ ಹಿಸ್ಟರಿ, ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಚಾಟಿಂಗ್ ಹಿಸ್ಟರಿ ಹಾಗೂ ಜಿ-ಮೇಲ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ಗ್ಯಾಲರಿಯಲ್ಲಿ ಸಿಕ್ರೆಟ್ ಫೋಲ್ಡರ್​ಗಳಲ್ಲಿನ ಪೋಟೋ ಮತ್ತು ವಿಡಿಯೋ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ.

ಬರ್ತಡೇ ಪಾರ್ಟಿ ಸೇರಿ ವಿವಿಧ ಪಾರ್ಟಿಗಳಲ್ಲಿ ಭಾಗಿಯಾಗಿರುವ ಭಾಗಿ ಮಾಹಿತಿ ತಿಳಿದುಬಂದಿದ್ದು, ಈ ಬಗ್ಗೆ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲೆಲ್ಲಿ ಪಾರ್ಟಿಗಳನ್ನು ಮಾಡಲಾಗ್ತಿತ್ತು? ಪಾರ್ಟಿಗಳ ಉದ್ದೇಶವೇನು? ಪಾರ್ಟಿಗಳಲ್ಲಿ‌ ಯಾರೆಲ್ಲಾ ಭಾಗಿಯಾಗ್ತಿದ್ರು? ಹೀಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ.

ಆದ್ಯತೆ ಕೊಟ್ಟು ತನಿಖೆ ಆಗಲಿದೆ

ಸೌಜನ್ಯ ಆತ್ಮಹತ್ಯೆ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಕರಣ ಸಂಬಂಧ ಸೂಕ್ತ ತನಿಖೆ ಆಗುತ್ತಿದೆ. ಅದು ಆತ್ಮಹತ್ಯೆಯಿರಲಿ ಅಥವಾ ಮಹಿಳೆಯ ಮೇಲಿನ ದೌರ್ಜನ್ಯವಿರಲಿ ಆದ್ಯತೆ ಕೊಟ್ಟು ತನಿಖೆ ಆಗಲಿದೆ. ಅವರು ಒಳ್ಳೆಯ ನಟಿ, ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಾಗುತ್ತಿಲ್ಲ. ಏನಾಗಿದೆ ಅದರ ಬಗ್ಗೆ ತಿಳಿದುಕೊಳ್ಳಿ ಎಂದು ಅಧಿಕಾರಿಗಳಿಗೆ ನಿನ್ನೆಯೆ ಹೇಳಿದ್ದೇನೆ ಎಂದರು.

ಸ್ಥಳ ಮಹಜರು

ಕುಂಬಳಗೋಡಿನ ಸನ್ ವರ್ತ್ ಅಪಾರ್ಟ್ಮೆಂಟ್​ನ 5E ಬ್ಲಾಕ್​ನ‌ ಸೌಜನ್ಯ ವಾಸವಿದ್ದ ಫ್ಲಾಟ್ ನಂ.901ಕ್ಕೆ ಆಗಮಿಸಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ನಟಿ ತಂದೆ ಪ್ರಭು ಮಾದಪ್ಪ ಮತ್ತು ಮಗ ಕೂಡ ಆಗಮಿಸಿದ್ದರು. ಮಹಜರು ವೇಳೆ ಎ2 ಆರೋಪಿ ಮಹೇಶ್​ನನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net